ಆಕೆಯ ಪೊಸೆಸಿವ್ನೆಸ್ ಗುಣ ಇಷ್ಟವಿಲ್ಲ

?????????

ಚೇತನ

ಪ್ರ : ನನ್ನ ಸಹೋದ್ಯೋಗಿ ಯೊಬ್ಬಳನ್ನು ಪ್ರೀತಿಸುತ್ತಿದ್ದೆ. ನಮ್ಮ ಪ್ರೀತಿಯ ವಿಷಯ ಆಫೀಸಿನವರಿಗೆಲ್ಲ ಗೊತ್ತಿದೆ. ಅವಳದು ಒಂದೇ ಕೆಟ್ಟ ಗುಣ ಅಂದರೆ ಪೊಸೆಸಿವ್‍ನೆಸ್. ನಾನು ಉಳಿದ ಹುಡುಗಿಯರ ಹತ್ತಿರ ಸ್ವಲ್ಪ ಸಲಿಗೆಯಿಂದ ಮಾತಾಡಿದರೂ ಅವಳಿಗೆ ಸಹಿಸಲು ಆಗುತ್ತಿರಲಿಲ್ಲ. ಅದಕ್ಕಾಗಿಯೇ ನನ್ನ ಹತ್ತಿರ ಜಗಳವಾಡುತ್ತಿದ್ದಳು. ಮೂರು ತಿಂಗಳ ಹಿಂದೆ ನಮ್ಮ ಆಫೀಸಿಗೆ ಹೊಸದಾಗಿ ಒಬ್ಬಳು ನನ್ನ ಅಸಿಸ್ಟೆಂಟಾಗಿ ಸೇರಿಕೊಂಡಿದ್ದಾಳೆ. ಕೆಲಸದ ವಿಚಾರದಲ್ಲಿ ನಾನು ಅವಳ ಹತ್ತಿರ ಮಾತಾಡುವುದು ಅನಿವಾರ್ಯವಾಗಿತ್ತು. ಅದಕ್ಕೂ ಅವಳು ತುಂಬಾ ಅಸಹನೆ ತೋರಿದಳು. ನನಗೆ ಸಹಿಸಲಾಗದೇ ಅವಳ ಮೇಲೆ ರೇಗಾಡಿ ನಮ್ಮ ಸಂಬಂಧವನ್ನೇ ಬ್ರೇಕಪ್ ಮಾಡಿಕೊಂಡೆ. ನನ್ನ ಅಸಿಸ್ಟೆಂಟ್ ನಮ್ಮ ಬ್ರೇಕಪ್ಪಿನ ಲಾಭ ಪಡೆದು ನನಗೆ ಹತ್ತಿರವಾದಳು. ನನಗೂ ಜೊತೆ ಬೇಕಾದ ಕಾರಣ ಮತ್ತು ನನ್ನ ಮೊದಲ ಗೆಳತಿಯ ಹೊಟ್ಟೆಯುರಿಸಲಿಕ್ಕಾಗಿಯೇ ನಾನು ಅವಳ ಜೊತೆ ತಿರುಗಲು ಶುರು ಮಾಡಿದೆ. ಮೊದಲು ನನಗೆ ಈ ಹೊಸ ಹುಡುಗಿಯ ಜೊತೆ ಸುತ್ತುವುದು ಖುಶಿಯಾಗುತ್ತಿತ್ತು. ಆದರೆ ಈಗೀಗ ನನಗೆ ಅದು ಇಷ್ಟವೇ ಆಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಹಳೆಯ ಪ್ರ್ರೇಮಿಯೇ ತುಂಬಿದ್ದಾಳೆÉ. ಅವಳು ನನಗೆ ಕೊಡುತ್ತಿದ್ದ ಉತ್ತೇಜನ, ಅವಳ ಕೇರಿಂಗ್ ಎಲ್ಲವನ್ನೂ ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳು ನಮ್ಮ ಆಫೀಸಿನಲ್ಲೇ ಇದ್ದರೂ, ನಾನು ಬೇರೆ ಹುಡುಗಿಯ ಜೊತೆ ತಿರುಗುವುದು ಗೊತ್ತಿದ್ದರೂ ಈಗ ಆಕೆ ನಿರ್ಭಾವುಕಳಾಗಿ ವರ್ತಿಸುತ್ತಿದ್ದಾಳೆ. ಆದರೆ ಕೆಲವೊಮ್ಮೆ ಅವಳು ವಾಶ್‍ರೂಮಿಗೆ ಹೋಗಿ ಕಣ್ಣೊರೆಸಿಕೊಂಡು ಬರುವುದನ್ನು ನೋಡಿದ್ದೇನೆ. ಅವಳ ಕಣ್ಣಿನಲ್ಲಿ ನೋವಿರುವುದನ್ನೂ ಗಮನಿಸಿದ್ದೇನೆ. ನನಗೆ ಅವಳೇ ಬೇಕು. ಅವಳನ್ನು ಪುನಃ ಪಡೆಯಲು ನಾನೀಗ ಏನು ಮಾಡಲಿ?

: ಬಹುಶಃ ನಿಮ್ಮ ಈ ಲೂಸ್ ಗುಣದಿಂದಾಗಿಯೇ ಅವಳಿಗೆ ನಿಮ್ಮ ಬಗ್ಗೆ ಅಸುರಕ್ಷತೆ ಕಾಡುತ್ತಿದ್ದಿರಬಹುದು. ಅದಕ್ಕಾಗಿಯೇ ಅವಳು ಯಾರ ಹತ್ತಿರ ನೀವು ಮಾತಾಡಿದರೂ ಸಂಶÀಯ ಪಡುತ್ತಿರಬಹುದು. ಅದನ್ನು ನೀವು ಇಷ್ಟು ಬೇಗ ಬೇರೆ ಹುಡುಗಿಯ ಜೊತೆ ಓಡಾಡುತ್ತಿರುವುದರ ಮೂಲಕ ಪುರಾವೆ ಮಾಡಿಬಿಟ್ಟಿರಿ. ಅದಿರಲಿ, ನಿಮಗೆ ಈಗ ಮೊದಲ ಪ್ರೇಮಿಯೇ ಬೇಕೆನ್ನುತ್ತೀರಿ. ಅಂದರೆ ಅವಳು ಮೊದಲಿನ ರೀತಿಯಲ್ಲೇ ನಿಮ್ಮ ಮೇಲೆ ಸಂಶಯ ಪಟ್ಟರೂ ತೊಂದರೆ ಇಲ್ಲವಾ? ಅಥವಾ ನೀವೇ ಮುಂದೆ ಬದಲಾಗುತ್ತೀರಾ ಇಲ್ಲಾ ಅವಳನ್ನೇ ಬದಲಿಸುತ್ತೀರಾ? ಯಾಕೆಂದರೆ ಇದೇ ರೀತಿ ಮುಂದುವರಿದರೆ ನೀವು ಪುನಃ ಒಂದಾದರೂ ಮುಂದೆ ನಿಮ್ಮಿಬ್ಬರ ಮಧ್ಯೆ ಜಗಳವಾಗುವ ಸಾಧ್ಯತೆ ಇರುತ್ತದೆ. ಆಕೆ ನಿಮ್ಮ ಬಗ್ಗೆ ತೋರಿಸುತ್ತಿದ್ದ ಪೊಸೆಸಿವ್ನೆಸ್‍ನ್ನು ಅವಳಿಗೆ ನಿಮ್ಮ ಮೇಲಿರುವ ಅತೀವ ಪ್ರೀತಿ ಅಂತ ತಿಳಿದುಕೊಂಡು ಆಕೆ ಈಗ ಯಾವ ರೀತಿ ಇದ್ದಾಳೋ ಅದೇ ರೀತಿ ಅವಳನ್ನು ನೀವು ಸ್ವೀಕರಿಸುವುದಾದರೆ ಮಾತ್ರ ಪುನಃ ಅವಳ ಬಳಿ ಹೋಗುವುದು ಒಳ್ಳೆಯದು. ಆಕೆ ಮೇಲೆ ನಿಮಗಿರುವ ಪ್ರೀತಿಯನ್ನು ನಿವೇದಿಸಿಕೊಂಡು, ಅವಳ ಜೊತೆಯಿಲ್ಲದೇ ನೀವು ಪಟ್ಟ ಬವಣೆಯನ್ನು ವಿವರಿಸಿ ಮುಂದೆ ಎಂದೂ ಇಂತಹ ಸಣ್ಣಪುಟ್ಟ ವಿಷಯಕ್ಕೆ ದೂರ ಹೋಗುವುದಿಲ್ಲ ಅಂತ ಪ್ರಾಮಿಸ್ ಮಾಡಿದರೆ ಆಕೆ ಒಪ್ಪಬಹುದೇನೋ.. ಆದಷ್ಟು ಬೇಗ ಎಂಗೇಜ್ಮೆಂಟ್ ಮಾಡಿಕೊಂಡರೆ ಆಕೆಗೂ ನಿಮ್ಮ ಬಗ್ಗೆ ಭರವಸೆ ಮೂಡಬಹುದು. ನೀವೂ ಉಳಿದವರ ಜೊತೆ ತುಂಬಾ ಸಲಿಗೆ ತೋರಿಸಬೇಡಿ. ಹಾಗೆಯೇ ಆಕೆಗೂ ನಿಮ್ಮ ಬಗ್ಗೆ ನಂಬಿಗೆ ಇಡಲು ಹೇಳಿ. ಸಂಬಂಧಕ್ಕೆ ಯಾವಾಗಲೂ ಪಾರದರ್ಶಕತೆ ಹಾಗೂ ವಿಶ್ವಾಸದ ಬುನಾದಿ ಗಟ್ಟಿಯಾಗಿರಬೇಕು.

 

LEAVE A REPLY