ಇಶಾನ್ ಜೊತೆಯಾಗಲಿರುವ ಶಾನ್ವಿ

`ಮಾಸ್ಟರ್ ಪೀಸ್’ ಚಿತ್ರದಲ್ಲಿ ಯಶ್ ಜೊತೆ ನಟಿಸಿದ ನಂತರ ಸ್ಯಾಂಡಲ್ವುಡ್ಡಿನಲ್ಲಿ ಭಾರೀ ಬೇಡಿಕೆ ಪಡೆಯುತ್ತಿರುವ ಶಾನ್ವಿ ಶ್ರೀವಾಸ್ತವ ಈಗಾಗಲೇ ಚಿರಂಜೀವಿ ಸರ್ಜಾ, ಮನೋರಂಜನ್, ದರ್ಶನ್, ಶ್ರೀ ಮುರುಳಿ ಜೊತೆ ನಟಿಸಿದ್ದಾಳೆ. ಈಗ ಶಾನ್ವಿ ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ `ಅಮ್ಮ ಐ ಲವ್ ಯೂ’ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾಳೆ. ಈ ಸಿನಿಮಾದ ನಾಯಕ `ರೋಗ್’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ಇಶಾನ್.

ಈ ಸಿನಿಮಾ ತಮಿಳಿನ `ಪಿಚ್ಬೈಕಾರನ್’ ರಿಮೇಕ್ ಆಗಿದ್ದು ಇದು ದ್ವಾರಕೀಶ್ ನಿರ್ಮಿಸುತ್ತಿರುವ 51ನೇ ಚಿತ್ರವಾಗಿದೆ. `ಆ ದಿನಗಳು’ ಖ್ಯಾತಿಯ ಚೈತನ್ಯ ಈ ಸಿನಿಮಾದ ನಿರ್ದೇಶಕ. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದೆ.