ಬಿಹಾರ ರಾಜಕೀಯ ಕಲಹ : ಶರದ್ ರಾಜೀನಾಮೆ ಬೆದರಿಕೆ

ನವದೆಹಲಿ : ಬಿಹಾರ ಸೀಎಂ ನಿತೀಶ್ ಕುಮಾರ್ ಇದೀಗ ಲಾಲೂ ಪ್ರಸಾದ್ ಪುತ್ರ, ಉಪ-ಮುಖ್ಯಮಂತ್ರಿ ತೇಜಸ್ವಿ ರಾಜೀನಾಮೆ ವಿಷಯದಲ್ಲಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಜೆಡಿಯುನೊಳಗೆ ಮತ್ತು ಮೈತ್ರಿಪಕ್ಷ ಕಾಂಗ್ರೆಸಿನಲ್ಲಿ ತೀವ್ರ ಬಿರುಕು ಉಂಟಾಗಿದೆ. ಈ ಮಧ್ಯೆ ನಿತಿಶ್ ವಿರುದ್ಧ ಜೆಡಿಯು ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಶರದ್ ಯಾದವ್ ಬಲವಾದ ಆರೋಪ ಹೊರಿಸಲಾರಂಭಿಸಿದ್ದಲ್ಲದೆ, ಯಾವುದೇ ಕಾರಣಕ್ಕೂ ಕೇಸರಿ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಲ್ಲಿ ತಾನು ರಾಜೀನಾಮೆ ನೀಡುವೆ ಎಂದಿದ್ದಾರೆ.