ನಾಯಕಿಪ್ರಧಾನ ಚಿತ್ರ ಸಾನ್ವಿಯಲ್ಲಿ ಶಾನ್ವಿ

ಸಾನ್ವಿ ಶ್ರೀವಾಸ್ತವ ಕೆಲವು ದಿನಗಳ ಹಿಂದಷ್ಟೇ ತನಗೆ ಹೀರೋ ಹಿಂದೆ ತಿರುಗುವ ಪಾತ್ರಗಳಿಗಿಂತ ಗಟ್ಟಿಪಾತ್ರವಿರುವ ಚಿತ್ರಗಳಲ್ಲಿ ನಟಿಸುವ ಆಸೆ ಎಂದು ಹೇಳಿಕೊಂಡಿದ್ದಳು. ಇದೀಗ ಆಕೆಯ ಕನಸು ನನಸಾಗುತ್ತಿದೆ. ಶಾನ್ವಿ ಈಗ `ಸಾನ್ವಿ’ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು ಇದೊಂದು ನಾಯಕಿ ಪ್ರಧಾನ ಚಿತ್ರವಾಗಿದೆ. ಚಿತ್ರದಲ್ಲಿ ಆಕೆಯೇ ಹೀರೋ!

ವರುಣದೇವ ಕೊಲಪು ನಿರ್ದೇಶನದ `ಸಾನ್ವಿ’ ಸಿನಿಮಾದಲ್ಲಿ ಶಾನ್ವಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾಳೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಬಗೆಯ ಪಾತ್ರದಲ್ಲಿ ಶಾನ್ವಿ ಕಾಣಿಸಿಕೊಳ್ಳುತ್ತಾಳೆ. ಈ ಸಿನಿಮಾದಲ್ಲಿ ಆಕೆಗೆ ತನ್ನ ಅಭಿನಯದ ಟ್ಯಾಲೆಂಟ್ ತೋರಿಸಲು ಹೆಚ್ಚಿನ ಅವಕಾಶವಿದೆ ಎನ್ನುತ್ತಾರೆ ವರುಣದೇವ.

ಸದ್ಯ ರಕ್ಷಿತ್ ಶೆಟ್ಟಿ ಜೊತೆ `ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಶಾನ್ವಿ ನಟಿಸುತ್ತಿದ್ದಾಳೆ. ಜೊತೆಗೇ `ಸಾನ್ವಿ’ ಚಿತ್ರಕ್ಕೂ ರೆಡಿಯಾಗುತ್ತಿದ್ದಾಳೆ ಶಾನ್ವಿ.

LEAVE A REPLY