ಆಳ್ವಾಸ್ ವಿರಾಸತ್ : ರಂಜಿಸಿದ ಶಂಕರ್ ಸಂಗೀತ ರಸಮಂಜರಿ

ಮೂಡಬಿದಿರೆ :  ಇಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್ ಸಾಂಸ್ಕøತಿಕ ಹಬ್ಬದ ಎರಡನೇ ದಿನವಾದ ಶನಿವಾರದಂದು ಖ್ಯಾತ ಹಿನ್ನೆಲೆಗಾಯಕ ಶಂಕರ್ ಮಹಾದೇವನ್ ಮತ್ತವರ ತಂಡ ತಮ್ಮ ಅದ್ಭುತ ಸಂಗೀತ ಕಾರ್ಯಕ್ರಮದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ವನಜಾಕ್ಷಿ ಶ್ರೀಪತಿ ಭಟ್ ತೆರೆದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  ಮಹಾದೇವನ್ ಅವರಿಗೆ ಎಹ್ಸಾನ್ ನೂರಾನಿ, ಲಾಯ್ ಮೆಂಡೋನ್ಸ ಹಾಗೂ ಶ್ರೀನಿಧಿ ಸಾಥ್ ನೀಡಿದ್ದರು. ಹಲವಾರು ಹಿಂದಿ ಹಾಗೂ ಕನ್ನಡ ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಈ ತಂಡ ಪ್ರೇಕ್ಷಕರ ಭಾರೀ ಚಪ್ಪಾಳೆ ಗಿಟ್ಟಿಸಿದೆ. ಸಂಗೀತ ರಸಮಂಜರಿ ಸುಮಾರು ಎರಡೂವರೆ ತಾಸು ನಡೆದು ನೆರೆದಿದ್ದವರಿಗೆ ಒಂದು ಅವಿಸ್ಮರಣೀಯ ಅನುಭವ ನೀಡಿತು.

 

 

LEAVE A REPLY