ಶಂಕರಮೂರ್ತಿ ಮ ಪ್ರ ರಾಜ್ಯಪಾಲ ?

ಬೆಂಗಳೂರು : ಹಿರಿಯ ರಾಜಕಾರಣಿ ನಾಯಕ ಡಿ ಎಚ್ ಶಂಕರಮೂರ್ತಿ ರಾಜ್ಯಪಾಲರಾಗಿ ನಿಯುಕ್ತಿಗೊಳ್ಳುವ ಸಾಧ್ಯತೆ ಇದೆ.

ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗರನ್ನು ಶಂಕರಮೂರ್ತಿ ಮತ್ತು ಬಿಜೆಪಿಯ ಇತರ ರಾಜ್ಯ ನಾಯಕರು ಭೇಟಿಯಾಗಿದ್ದ ವೇಳೆ ಕೇಂದ್ರ ಸರಕಾರ ಈ ಪ್ರಸ್ತಾಪ ಮಾಡಿದೆ ಎನ್ನಲಾಗಿದೆ.

ಇವರು ಈ ಹಿಂದೆ ಕೆಲವು ದಶಕಗಳಷ್ಟು ಕಾಲ ಜನಸಂಘದಲ್ಲಿ ಸಕ್ರಿಯರಾಗಿದ್ದು, ಈ ಬಾರಿ ಮಧ್ಯಪ್ರದೇಶದ ರಾಜ್ಯಪಾಲರಾಗುವ ಸಂಭವವವಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.