ವಾರದಲ್ಲಿ ಎರಡು ದಿನ ಸಂತೆ ನರಕಯಾತನೆ ಸ್ವಾಮಿ ಇದು

ಪುತ್ತೂರು ನಗರಸಭೆಯ ದುರ್ಬಲ  ಭ್ರಷ್ಟ ಆಡಳಿತವನ್ನು ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಯಾಕೆ ಗಮನಿಸುತ್ತಿಲ್ಲ   ಪುತ್ತೂರು ನಗರಸಭೆಯು ವಾರದಲ್ಲಿ ಎರಡು ದಿನ ಸಂತೆ ಮಾಡುವ ಉದ್ದೇಶ ಏನು  ಮಾನ್ಯ ಜಿಲ್ಲಾಧಿಕಾರಿಯವರು  ವಾರದ ಸಂತೆ ಸೋಮವಾರ  ಎಂಬ ವಿಚಾರವು ತಿಳಿದಿದ್ದರೂ  ಎ ಸಿ ಯಾಗಿದ್ದ ರಾಜೇಂದ್ರರವರು  ನ್ಯೂಸೆನ್ಸ್  ಎಂದು ಸಂತೆಯನ್ನು ತಡೆಗಟ್ಟಿರುವ ಉದ್ದೇಶವಾದರೂ ಏನು   ಅಧಿಕಾರಶಾಹಿ ಆಡಳಿತವನ್ನು ಪುತ್ತೂರು ನಾಗರಿಕರು ಕಟುವಾಗಿ ವಿರೋಧಿಸುತ್ತಾರೆನ್ನುವುದನ್ನು ಜಿಲ್ಲಾಧಿಕಾರಿ ಅರಿತುಕೊಳ್ಳಲಿ  ಸಾರ್ವಜನಿಕ ಹಿತಾಸಕ್ತಿಯ  ಸಂಸ್ಕøತಿಯ ಒಂದು ಮಹತ್ವದ ಅಂಗವಾಗಿರುವ ವಾರದ ಸಂತೆಯನ್ನು ಜರುಗಿಸಲು  ಯಾವ ಕಾನೂನು ಅಡ್ಡಿ
ಕಾನೂನು ನಿಯಮ ಅರಿಯದ ನಗರಸಭಾಧ್ಯಕ್ಷೆ  ಅಲ್ಲಿಯ ಭಾಜಪ ಮತ್ತು ಕಾಂಗ್ರೆಸ್ ಕೌನ್ಸಿಲ್ಲರುಗಳು ಹಾಗೂ ಆಯುಕ್ತೆ ಯಾವ ನಿರ್ಣಯಗೊಂಡರೂ ಅದು ಕಾನೂನಿನ ಉಲ್ಲಂಘನೆಯಾಗಿದೆ  ಎಎಸ್ಪಿ ರಿಷ್ಯಂತ್ ಕೂಡಾ ಅಂದಿನ ಎಸಿ ರಾಜೇಂದ್ರ ಜತೆ ಕೈ ಜೋಡಿಸಿ ಪೊಲೀಸ್ ಲಾಠಿ ಬೆದರಿಕೆಯೊಡ್ಡಿ ಸಂತೆಗೆ ಬಂದ  ಅನ್ನದಾತ ರನ್ನು ಹೊಡೆದೊಡಿಸಿದ್ದು ಅಮಾನವೀಯವಾದುದೆಂದು ಶಾಸಕಿ  ಲೋಕಸಭಾ ಸದಸ್ಯ  ಜಿಪಂ ಅಧ್ಯಕ್ಷೆ  ತಾಪಂ ಅಧ್ಯಕ್ಷೆಗೆ ತಿಳಿದಿಲ್ಲವೇ   ಯಾವ ಮುಖದಲ್ಲಿ ಮತ್ತೊಮ್ಮೆ ಅನ್ನದಾತರಿಂದ ಮತ ಯಾಚಿಸುತ್ತೀರಿ
ದ ಕ ಉಸ್ತುವಾರಿ ಸಚಿವ ರಮಾನಾಥ ರೈಯವರು ಜಿಲ್ಲಾಧಿಕಾರಿಯವರೊಂದಿಗೆ ಕಿಲ್ಲೆ ಮೈದಾನಕ್ಕೆ ಸ್ವತಃ ಬಂದು ನಗರಸಭೆ ಆಯುಕ್ತರನ್ನು ಅಧ್ಯಕ್ಷರನ್ನು ಎಸಿ  ಎಎಸ್ಪಿಯವರನ್ನು ಕರೆಯಿಸಿ  ವಾರದ ಸೋಮವಾರದ ಸಂತೆಗೆ ಶಾಶ್ವತ ಸ್ಥಳ ನಿಗದಿಪಡಿಸಲಿ
ಸಂತೆಯನ್ನು ನಿರ್ಬಂಧಿಸುವ ಅಧಿಕಾರ ಯಾವ ಅಧಿಕಾರಿಗೂ ಇಲ್ಲ ಎಂಬ ವಿಚಾರವನ್ನು ಪೊಲೀಸ್ ಅಧಿಕಾರಿಗಳು ಮನಗಾಣಲಿ

  • ನಾರಾಯಣ ಬಿ  ಪುತ್ತೂರು