ಶಾಹೀದ್-ಕಂಗನಾ ಖುಲ್ಲಂಖುಲ್ಲಾ ಲವ್

ಕಂಗನಾ ರಣಾವತ್ ಸೈಫ್ ಆಲಿ ಖಾನ್ ಹಾಗೂ ಶಾಹೀದ್ ಕಪೂರ್ ಇಬ್ಬಿಬ್ಬರ ಜೊತೆ ಲವ್ ಮಾಡಲಿರುವ `ರಂಗೂನ್’ ಚಿತ್ರದ ಒಂದಲ್ಲಾ ಒಂದು ರಂಗುರಂಗಿನ ಹೊಸ ಸುದ್ದಿ ಹೊರಬೀಳುತ್ತಿದ್ದು ಚಿತ್ರರಸಿಕರ ಕುತೂಹಲ ಕೆರಳಿಸುತ್ತಿದೆ.
ಇದೀಗ ಶಾಹೀದ್ ಕಪೂರ್ ಹಾಗೂ ಕಂಗನಾಳ ಖುಲ್ಲಂಖುಲ್ಲಾ ಪ್ರೀತಿಸುವ ದೃಶ್ಯವೇ ಹೈಲೈಟಾಗಿರುವ ಹಾಡೊಂದು ರಿಲೀಸ್ ಆಗಿದ್ದು ಪಡ್ಡೆಗಳ ನಿದ್ದೆಗೆಡಿಸುವಂತಿದೆ. ನದಿಕಿನಾರೆಯ ಮಣ್ಣಿನಲ್ಲಿ ಟಾಪ್ ಲೆಸ್ ಕಂಗನಾ ಹಾಗೂ ಶಾಹೀದ್ ಚುಂಬಿಸುತ್ತಿರುವ ರೊಮ್ಯಾಂಟಿಕ್ ಹಾಡು ಈಗ ಇಂಟರ್ನೆಟ್ಟಿನಲ್ಲಿ ವೈರಲ್ ಆಗಿದೆ. ಈ ರೊಮ್ಯಾಂಟಿಕ್ ಸೀನಿಗೆ ಗುಲ್ಜಾರ್ ಸಾಬ್ ಸಾಹಿತ್ಯವಿದ್ದು ವಿಶಾಲ್ ಭಾರಧ್ವಾಜ್ ಸಂಗೀತ ಸಂಯೋಜನೆಯಿದೆ. ಜೊತೆಗೇ ಈಗಿನ ಯುವ ಸೆನ್ಸೇಷನ್ ಅರಿಜಿತ್ ಸಿಂಗ್ ಕಂಠದಲ್ಲಿ ಮೂಡಿಬಂದಿರುವ ಈ `ಏ ಇಷ್ಕ್ ಹೇ’ ಹಾಡು ಬಹುದಿನಗಳವರೆಗೆ ಹಾಡಿನ ಚಾರ್ಟಿನಲ್ಲಿ ಟಾಪ್ ಪೊಸಿಷನ್ ಅಲಂಕರಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಂದ ಹಾಗೆ ಹಾಡಿನ ವಿಶುವಲ್ ಕೂಡಾ ಅಷ್ಟೇ ಮನಸೆಳೆಯುವಂತಿದೆ. ಶಾಹೀದ್-ಕಂಗನಾ ಕೆಮೆಸ್ಟ್ರಿಯೂ ಅಷ್ಟೇ ಅದ್ಭುತವಾಗಿದೆ.
`ರಂಗೂನ್’ ಚಿತ್ರವೊಂದು ಮಹಾಯುದ್ಧದ ಸಮಯದಲ್ಲಿ ಅರಳುವ ತ್ರಿಕೋನ ಪ್ರೇಮದ ಕತೆಯಾಗಿದ್ದು ವಿಶಾಲ್ ಭಾರಧ್ವಾಜ್ ಅವರ ಪರಿಕಲ್ಪನೆಯ ಸಿನಿಮಾವಾಗಿದೆ. ಚಿತ್ರ ಫೆಬ್ರುವರಿ 24ರಂದು ತೆರೆಕಾಣಲಿದೆ.