ಶಾಹೀದ್ ಚಿತ್ರದಲ್ಲಿ ಶ್ರದ್ಧಾ ನಾಯಕಿ, ಯಾಮಿ ಲಾಯರ್

ಶಾಹೀದ್ ಕಪೂರ್ `ಪದ್ಮಾವತ್’ ಚಿತ್ರದ ನಂತರವೀಗ `ಬಟ್ಟಿ ಗುಲ್ ಮೀಟರ್ ಚಾಲೂ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಶಾಹೀದ್ ನಾಯಕಿಯಾಗಿ ಶ್ರದ್ಧಾ ಕಪೂರ್ ನಟಿಸಲಿದ್ದಾಳೆ. ಇದೀಗ ಬಂದ ಸುದ್ದಿಯ ಪ್ರಕಾರ ಯಾಮಿ ಗೌತಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾಳೆ.

ಈ ಸಿನಿಮಾವೊಂದು ಎಲೆಕ್ಟ್ರಿಸಿಟಿ ಬಿಲ್ ಕುರಿತಾಗಿದ್ದು ಇದೊಂದು ಸಾಮಾಜಿಕ ಕಳಕಳಿಯ ಚಿತ್ರ. ಜೊತೆಗೇ ಕಾಮಿಡಿ ಸೀನುಗಳೂ ಬಹಳಷ್ಟಿವೆ ಎನ್ನಲಾಗಿದೆ. ಚಿತ್ರದಲ್ಲಿ ಯಾಮಿ ಗೌತಮ್ ಲಾಯರ್ ಪಾತ್ರದಲ್ಲಿ ನಟಿಸಲಿದ್ದಾಳೆ. ಯಾಮಿ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕ ಬಗ್ಗೆ ಭಾರೀ ಎಕ್ಸೈಟ್ ಆಗಿದ್ದಾಳೆ.

ಪ್ರೇರಣಾ ಅರೋರಾ ಈ ಚಿತ್ರ ನಿರ್ಮಿಸುತ್ತಿದ್ದು ಶ್ರೀ ನಾರಾಯಣ್ ಸಿಂಗ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಇದೇ ವರ್ಷ ಅಗಸ್ಟ್ 31ಕ್ಕೆ ರಿಲೀಸ್ ಆಗಲು ಶೆಡ್ಯೂಲ್ ಆಗಿದೆ.