`ಶಾಸ್ತ್ರ, ಶಸ್ತ್ರ’ದಲ್ಲಿ ತರಬೇತಿ ಹೊಂದಿದ ಪತಂಜಲಿ ಸೆಕ್ಯುರಿಟಿ ಗಾರ್ಡುಗಳು !

ನವದೆಹಲಿ : ಗ್ರಾಹಕೋತ್ಪನ್ನ ಕ್ಷೇತ್ರದಲ್ಲಿ ನೂರಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಸಾಕಷ್ಟು ಸಂಚಲನ ಮೂಡಿಸಿರುವ ಪತಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮದೇವ್ ಇದೀಗ ಸೆಕ್ಯುರಿಟಿ ಸರ್ವಿಸ್ ಕ್ಷೇತ್ರಕ್ಕೂ ಕಾಲಿಡಲಿದ್ದಾರಂತೆ. ಅಂದ ಹಾಗೆ

ಅವರ ಸಂಸ್ಥೆಯ ಮೂಲಕ  ನೇಮಕಾತಿಗೊಳ್ಳುವ ಸೆಕ್ಯುರಿಟಿ ಗಾರ್ಡುಗಳು ಶಾಸ್ತ್ರ ಹಾಗೂ ಶಸ್ತ್ರ ಈ ಎರಡೂ ವಿಚಾರಗಳಲ್ಲಿ ತರಬೇತಿ ಪಡೆದವರಾಗಲಿದ್ದಾರಲ್ಲದೆ, ದೇಶಭಕ್ತರಾಗಿರಲಿರುವ ಅವರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುತ್ತಾರೆ ಎದು ಪತಂಜಲಿ ಸಂಸ್ಥೆಯ ವಕ್ತಾರ ಎಸ್ ಕೆ ತಿಜಾರವಾಲ ಹೇಳಿಕೊಂಡಿದಾರೆ. ಈ ಕ್ಷೇತ್ರದಲ್ಲಿ ಪತಂಜಲಿ ರೂ 40,000 ಕೋಟಿಯಿಂದ ರೂ 50,000 ಕೋಟಿ ತನಕ ಹೂಡಿಕೆ ಮಾಡಲಿದ್ದು, ಸುಮಾರು 50 ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಉದ್ದೇಶವನ್ನು ಹೊಂದಿದೆ.