ಬಜಪೆಯಲ್ಲಿ ನೂತನ ಅಂಗಡಿ ಮಳಿಗೆ ನಿರ್ಮಿಸಲು ಸೆಝ್ ಅನುಮತಿ ಪಡೆದಿಲ್ಲ

ಮುಲ್ಕಿ : ಬಜಪೆ ಗ್ರಾ ಪಂ ಪರವಾನಿಗೆ ಪಡೆಯದೇ ನೂತನ ಮಾರುಕಟ್ಟೆಯ ಅಂಗಡಿ ಮಳಿಗೆಗಳ ನಿರ್ಮಾಣವನ್ನು ಸೆಝ್ ಕಾರ್ಯಾರಂಭಿಸಿದ್ದು, ಇದರಿಂದ ಗ್ರಾಮಸ್ಥರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಬಗ್ಗೆ  ಗ್ರಾಮ  ಪಂಚಾಯತ್ ಅಧ್ಯಕ್ಷೆ ರೋಝಿ ಮಥಾಯಸ್ ಅಧ್ಯಕ್ಷತೆಯಲ್ಲಿ  ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.  “ಬಜ್ಪೆ ಪಟ್ಟಣದ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ ಅಂಗಡಿ ಮಾಲಕರಿಂದ ಹಣ ಸಂಗ್ರಹಿಸಿ ಅವರಿಗೆ ಬೇಕಾದಂತೆ ನಿರ್ಮಾಣ ಮಾಡುವ ಹುನ್ನಾರ ನಡೆಯುತ್ತಿವೆ. ಇದು ಕಾನೂನುಬಾಹಿರ” ಎಂದು ಸದಸ್ಯ ಸಾಹುಲ್ ಹಮೀದ್ ಆರೋಪಿಸಿದರು.

ಅಂಗಡಿ ಮಾಲಕರಿಂದ ಡಿಪಾಸಿಟ್ ರೂಪದಲ್ಲಿ ಹಣವನ್ನು ಪಡೆದುಕೊಂಡು ಅಂಗಡಿ ಕೋಣೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪಿಡಿಒ ಸಾಹೀಶ್ ಚೌಟ ತಿಳಿಸಿದರು.