ವಿಕೃತಕಾಮಿ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಶಾಲಾ ವಿದ್ಯಾರ್ಥಿನಿ ಮುಂದೆ ನಗ್ನವಾಗಿನಿಂತ ವಿಕೃತಕಾಮಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬದಿಯಡ್ಕ ಗೋಳಿಯಡ್ಕದ ಕೆ ಎಂ ಮಂಜಿಲಿನ ಜಿ ಮೊಹಮ್ಮದ್ ಯಾನೆ ಶಾಫಿ (23) ನ್ಯಾಯಾಂಗ ಬಂಧನಕ್ಕೊಳಗಾದ ವಿಕೃತಕಾಮಿ. ನಾಲ್ಕು ದಿನದ ಹಿಂದೆ ನೀರ್ಚಾಲು ಬಳಿಯ ಮೊಳೆಯಾರು ಎಂಬಲ್ಲಿನ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಬಂಧಿತ ಆರೋಪಿ ರಸ್ತೆಯಲ್ಲಿ ನಿಂತು ಬಾಲಕಿ ಮುಂದೆ ನಗ್ನನಾಗಿದ್ದ. ಮನೆಗೆ ತಲುಪಿದ ಬಾಲಕಿ ವಿಷಯ ತಿಳಿಸಿದ್ದಳು. ಮನೆಯವರು ಬದಿಯಡ್ಕ ಪೆÇಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಕೇಸು ದಾಖಲಿಸಿಕೊಂಡ ಪೆÇಲೀಸರು ತನಿಖೆ ನಡೆಸಿದಾಗ ನಗ್ನತೆ ಪ್ರದರ್ಶಿಸಿದ ಯುವಕನ ಗುರುತು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.