ಪುಸಲಾಯಸಿ ಸೆಕ್ಸ್ ಮಾಡಿದರೆ ಅತ್ಯಾಚಾರವಲ್ಲ : ಹೈ ಕೋರ್ಟ್

ಮುಂಬೈ : ವಿವಾಹವಾಗುವುದಾಗಿ ಪುಸಲಾಯಿಸಿ ಸೆಕ್ಸ್ ನಡೆಸಿದರೆ ಅದನ್ನು ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟು ಸ್ಪಷ್ಟಪಡಿಸಿದೆ.

ತನ್ನ ಮಾಜಿ ಗೆಳೆಯನ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆ ವೇಳೆ ಜಸ್ಟಿಸ್ ಮೃದುಲಾ ಭಟ್ಕರ್, ಆಕೆ ಸುಶಿಕ್ಷಿತೆಯಾಗಿದ್ದರೆ ವಿವಾಹಕ್ಕೆ ಮುಂಚಿನ ಪರಸ್ಪರರ ಲೈಂಗಿಕತೆಯ ನಿರ್ಧಾರಕ್ಕೆ ಆಕೆಯೂ ಜವಾಬ್ದಾರಳೆಂದು ಪರಿಗಣಿಸಬೇಕಾಗುತ್ತದೆ ಎಂದರು.

“ಸುಶಿಕ್ಷಿತ ಮಹಿಳೆಯೊಬ್ಬಳಿಗೆ ಪುರುಷನೊಂದಿಗೆ ಸೆಕ್ಸ್ ನಡೆಸುವಾಗ ಅದರ ಪರಿಣಾಮ ಅರಿವಿರಲೇಬೇಕು. ಗಂಡಸೊಬ್ಬ  ವಿವಾಹವಾಗುವುದಾಗಿ ಪುಸಲಾಯಿಸಿ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗದು” ಎಂದು ನ್ಯಾಯಾಧೀಶೆ ಸ್ಪಷ್ಪಡಿಸಿದರು.

“ಮದುವೆಯವರೆಗೂ ಕನ್ಯತ್ವ ಕಾಪಾಡಿಕೊಂಡು ಬರಬೇಕೆಂಬ ನೈತಿಕ ಕಟ್ಟುಪಾಡೊಂದಿತ್ತು. ಆಧುನಿಕ ಪೀಳಿಗೆ ಈ ಬಗ್ಗೆ ಚಿಂತಿತವಾಗಿಲ್ಲ ಮತ್ತು ವಿವಾಹಪೂರ್ವದಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು ಸಾಮಾನ್ಯವಾಗಿಬಿಟ್ಟಿದೆ” ಎಂದು ನ್ಯಾಯಾಧೀಶೆ ಹೇಳಿದರು.