ಅತ್ತಾವರದಲ್ಲಿ ಪಾಯಿಖಾನೆ ನೀರು ಹರಿದು ಗಬ್ಬುನಾತ

ಮಂಗಳೂರು ಪಾಲಿಕೆ ವ್ಯಾಪ್ತಿಯ ಅತ್ತಾವರ 55ನೇ ವಾರ್ಡಿನಲ್ಲಿ ಹರಿಯುವ ಒಳಚರಂಡಿ ನೀರು ಕಳೆದ ಹಲವಾರು ವರ್ಷಗಳಿಂದ ಹರಿಯುತ್ತಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪರಿಸರದ ಸುತ್ತಮುತ್ತಲಿನ ನಿವಾಸಿಗಳ ಪಾಯಿಖಾನೆ ನೀರು ಈ ಚರಂಡಿಯಲ್ಲಿ ಹರಿಯುತ್ತಿದ್ದರೂ ಸ್ಥಳೀಯ ಕಾರ್ಪೋರೇಟರ್ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪರಿಸರವಾಸಿಗಳಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಫಲ ಕೊಟ್ಟಿಲ್ಲ. ಪಾಲಿಕೆ ಸುತ್ತಮುತ್ತಲಿನ ಪರಿಸರವಾಸಿಗಳ ತಾಳ್ಮೆ ಪರೀಕ್ಷಿಸದೇ ಕೂಡಲೇ ಗಬ್ಬೆದ್ದು ಹೋದ ಚರಂಡಿಯನ್ನು ಶುಚಿಕರಿಸದಿದ್ದರೆ ಪ್ರಬಲ ಹೋರಾಟವನ್ನು ಎದುರಿಸಬೇಕಾದೀತು

  • ಚೇತಕ್ ಪೂಜಾರಿ
    ಮಂಗಳೂರು