ವಾಹನ ಉರುಳಿ ಹಲವರು ಆಸ್ಪತ್ರೆಗೆ

ರಾವಳಿ ಅಲೆ ವರದಿ

ಅಂಕೋಲಾ : ಮಹಾಶಿವರಾತ್ರಿ ನಿಮಿತ್ತ ಯಾಣಕ್ಕೆ ತೆರಳುತ್ತಿದ್ದ ಟಾಟಾ ಏಸ್ ಉರುಳಿದ ಪರಿಣಾಮ ಹಲವು ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಎಲ್ಲಾ ಗಾಯಾಳುಗಳು ತಾಲೂಕಿನ ಹೆಗ್ರೆ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಇಲ್ಲಿ ಬರುವ ಹಲವು ಯಾತ್ರಾರ್ಥಿಗಳು ಸಣ್ಣಪುಟ್ಟ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯ ಹೆದ್ದಾರಿಯಾದ ವಡ್ಡಿಘಾಟ-ದೇವನಹಳ್ಳಿ ರಸ್ತೆಯ ಅವ್ಯವಸ್ಥೆಯಿಂದಾಗಿ ಈ ಎಲ್ಲಾ ಅವಘಡ ನಡೆಯಲು ಕಾರಣ ಎನ್ನಲಾಗಿದೆ. ರಸ್ತೆ ದುರಸ್ಥಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಜಿ ಎಂ ಶೆಟ್ಟಿ ಎಚ್ಚರಿಸಿದ್ದಾರೆ.

LEAVE A REPLY