ಸರಣಿ ಅಪಘಾತ : ಹಲವರು ಆಸ್ಪತ್ರೆಗೆ

ಡಿಕ್ಕಿಯಾದ ಬಸ್ಸುಗಳು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ತಡಂಬೈಲು ಬಳಿ ತಡೆರಹಿತ ಬಸ್ ಚಾಲಕನ ಅವಾಂತರದಿಂದ ಸರಣಿ ಅಪಘಾತ ನಡೆದಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

accident1
ಜಖಂಗೊಂಡ ರಿಕ್ಷಾ

ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಎ ಕೆ ಎಮ್ ಎಸ್ ಎಂಬ ಹೆಸರಿನ ಬಸ್ ಅತೀವೇಗದಿಂದ ಚಲಿಸುತ್ತಿದ್ದಂತೆ ತಡಂಬೈಲು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ಉಡುಪಿ ಕಡೆಗಿನ ಹೆದ್ದಾರಿಯಲ್ಲಿ ಚಲಿಸಿದೆ. ಈ ಸಂದರ್ಭ ಉಡುಪಿ ಕಡೆಗೆ ಹೋಗುತ್ತಿದ್ದ ರಿಕ್ಷಾಗೆ, ನಿಂತಿದ್ದ ಸ್ಕೂಟರಿಗೆ ಹಾಗೂ ಸುರಗಿರಿ ಎಂಬ ಬಸ್ಸಿಗೆ ಡಿಕ್ಕಿ ಹೊಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ರಿಕ್ಷಾ ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರಾದ ರಮೇಶ್, ದೇವಿಕಾ, ಶಾಮಿನಿ ಮತ್ತಿತರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಸುರತ್ಕಲ್ ಸಂಚಾರಿ ಪೊಲೀಸರು ಕೂಡಲೇ ಧಾವಿಸಿ ವಾಹನಗಳನ್ನು ತೆರವುಗೊಳಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.