ಸುರತ್ಕಲ್ ಸರ್ವೀಸ್ ಬಸ್ ನಿಲ್ದಾಣವೋ ಖಾಸಗಿ ವಾಹನ ಪಾರ್ಕಿಂಗ್ ಸ್ಥಳವೋ ?

ಸುರತ್ಕಲ್ ಸರ್ವಿಸ್ ಬಸ್ ನಿಲ್ದಾಣವು ಬಸ್ಸುಗಳಿಗಿಂತಲೂ ಹೆಚ್ಚಾಗಿ ಖಾಸಗಿ ವಾಹನಗಳು  ಕಾರುಗಳು ಮತ್ತು ರಿಕ್ಷಾಗಳ ನಿಲ್ದಾಣವಾಗಿ ಮಾರ್ಪಟ್ಟಿದೆ.
ಅದರಲ್ಲಿಯೂ ರಾತ್ರಿ ವೇಳೆ ಇಲ್ಲಿನ ಅವಸ್ಥೆಯನ್ನು ಯಾರೂ ಕೇಳುವವರೇ ಇಲ್ಲ  ಸುರತ್ಕಲ್ ಪೊಲೀಸರು ಮೊದಮೊದಲು ಸುರತ್ಕಲ್ ನಿಲ್ದಾಣದಲ್ಲಿ ನಿಂತು ಇತರ ಖಾಸಗಿ ವಾಹನಗಳನ್ನು ನಿಯಂತ್ರಿಸುತ್ತಿದ್ದರು  ಕಳೆದ ಎರಡ್ಮೂರು ತಿಂಗಳಿನಿಂದ ಅವರು ಬಸ್ ನಿಲ್ದಾಣದ ಸುತ್ತ ಸುಳಿಯದಿರುವುದರಿಂದ ಇಲ್ಲಿ ಖಾಸಗಿ ವಾಹನಗಳ ಕಾರು ಬಾರಿನಿಂದ ಸರ್ವೀಸ್  ವೇಗದೂತ ಬಸ್ಸುಗಳು ಹೆದ್ದಾರಿಯಲ್ಲಿಯೇ ಜನರನ್ನು ಹತ್ತಿ ಇಳಿಸುವುದನ್ನು ಮಾಡುತ್ತಿದ್ದಾರೆ
ರಾತ್ರಿ ವೇಳೆ ಯಾವ ಕಡೆಯಿಂದ ಕಾರುಗಳು  ರಿಕ್ಷಾಗಳು ತಮ್ಮ ಮೇಲೆ ನುಗ್ಗುತ್ತವೆಯೋ ಎಂಬ ಹೆದರಿಕೆಯಲ್ಲೇ ಪ್ರಯಾಣಿಕರು ಬಸ್ ಕಾಯಬೇಕಾಗಿದೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಷ್ಟೇ ವೇಗದಲ್ಲಿ ಇಲ್ಲಿಗೆ ಕಾರುಗಳು ನುಗ್ಗುತ್ತವೆ ಮತ್ತು ಅಲ್ಲಿಂದ ಹೊರ ಹೋಗುತ್ತವೆ  ಬಸ್ ಕಾಯುತ್ತಿರುವ ಪ್ರಯಾಣಿಕರ ಕಾಲುಗಳ ಮೇಲೆಯೇ ಚಲಿಸಿದ ಕೆಲವು ಘಟನೆಗಳೂ ಇಲ್ಲಿ ನಡೆದಿವೆ  ಆಗ ಕಾರುಗಳಲ್ಲಿದ್ದವರು ಪಾಪದ ಪ್ರಯಾಣಿಕರ ಮೇಲೆಯೇ ದಬ್ಬಾಳಿಕೆ ನಡೆಸಿ ಹೋದ ಉದಾಹರಣೆಗಳಿವೆ  ಇದರಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಆದುದರಿಂದ ಬಸ್ ಹೊರತುಪಡಿಸಿ ಬೈಕ್  ಕಾರು  ರಿಕ್ಷಾ ಸೇರಿದಂತೆ ಬೇರೆ ಯಾವುದೆ ವಾಹನಗಳು ಬಸ್ ನಿಲ್ದಾಣದೊಳಗೆ ನುಗ್ಗಲು ಬಿಡಲೇಬಾರದು  ಸುರತ್ಕಲ್ ಪೊಲೀಸರ ಹೊಣೆ ಇದು
ಬಸ್ ನಿಲ್ದಾಣಗಳಿರುವುದು ಬಸ್ ಮತ್ತು ಪ್ರಯಾಣಿಕರಿಗಾಗಿಯೇ ಹೊರತು ಇತರ ಖಾಸಗಿ ವಾಹನಗಳಿಗಲ್ಲ.

  • ನವೀನ್ ಸುವರ್ಣ, ಸುರತ್ಕಲ್