ಟಯರ್ ಸಿಡಿದು ಶಾಲಾ ಮಕ್ಕಳ ವಾಹನಕ್ಕೆ ಗುದ್ದಿದ ಸರ್ವಿಸ್ ಬಸ್

ತಪ್ಪಿದ ದುರಂತ

ನಮ್ಮ ಪ್ರತಿನಿಧಿ ವರದಿ

ಮೂಲ್ಕಿ : ಹಳೆಯಂಗಡಿ ಸಮೀಪದ ತೋಕೂರಿನಲ್ಲಿ ಚಲಿಸುತ್ತಿದ್ದ ಬಸ್ ಟಯರ್ ಸಿಡಿದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಶಾಲಾ ಮಕ್ಕಳ ವಾಹನದಲ್ಲಿದ್ದ ಸುಮಾರು 10ಕ್ಕೂ ಹೆಚ್ಚು ಮಕ್ಕಳು ಅಪಾಯದಿಂದ ಪವಾಡಸದೃಶ ಪಾರಾಗಿದ್ದಾರೆ. ಶನಿವಾರ ಬೆಳಿಗ್ಗೆ ಮಂಗಳೂರಿನಿಂದ ಹಳೆಯಂಗಡಿಯಾಗಿ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಸರ್ವಿಸ್ ಬಸ್ ತೋಕೂರು ಸರ್ಕಾರಿ ಶಾಲೆ ಬಳಿ ಸಾಗುತ್ತಿದ್ದಾಗ ಶಾಲೆ ಸಮೀಪದ ತಿರುವಿನಲ್ಲಿ ಹಠತ್ತಾಗಿ ಬಸ್ ಟಯರ್ ಸಿಡಿದು ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಷಿಕೆರೆಯಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಮುಕ್ಕದ ಅಂಜುಮಾನ್ ಶಾಲೆ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಪರಿಣಾಮ ಶಾಲೆ ವಾಹನ ರಸ್ತೆ ಬದಿಯಲ್ಲಿದ್ದ ಸೂಚನಾ ಫಲಕಕ್ಕೆ ಬಡಿದು ನಿಂತಿದೆ. ಶಾಲಾ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಶಾಲಾ ವಾಹನದಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಶಾಲಾ ಮಕ್ಕಳನ್ನು ಬೇರೆ ವಾಹನದಲ್ಲಿ ಕಳುಹಿಸಲಾಯಿತು. ಮಂಗಳೂರು ಉತ್ತರ ಸಂಚಾರಿ ಪೆÇಲೀಸ್ ಠಾಣೆ ಪೆÇಲೀಸರು ಸ್ಥಳಕ್ಕೆ ಆಗಮಿಸಿ ವಾಹನವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.

 

LEAVE A REPLY