ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ನಗುಮುಖದ ಸೇವೆಗೈಯಬೇಕು : ಆರೋಗ್ಯ ಸಚಿವ

ಮಂಗಳೂರು : ಆಸ್ಪತ್ರೆಯ ಎಲ್ಲ ಸಿಬ್ಬಂದಿಯು ತಮ್ಮ ಶ್ರೇಣಿಯನ್ನು ಬದಿಗೊತ್ತಿ ರೋಗಿಗಳಲ್ಲಿ ವಿಶ್ವಾಸ ಮರು ಹುಟ್ಟಿಸುವಂತಹ ಗುಣನಡತೆ ತೋರÀಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಆಸ್ಪತ್ರೆ ಸಿಬ್ಬಂದಿಗೆ ಸಲಹೆ ನೀಡಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, “ವೈದ್ಯ ಪದವಿಯೊಂದೇ ಇದ್ದರೆ ಸಾಲದು. ರೋಗಿಗಳ ಉಪಚರಿಸುವಾಗ ವೈದ್ಯರ ವರ್ತನೆಯೂ ಉತ್ತಮವಾಗಿರಬೇಕು. ಆಸ್ಪತ್ರೆಯ `ಡಿ’ ಗುಂಪಿನ ಸಿಬ್ಬಂದಿಯಿಂದ ಹಿಡಿದು ಉನ್ನತ ಮಟ್ಟದ ಸಿಬ್ಬಂದಿಯು ಎಲ್ಲ ರೋಗಿಗಳಿಗೆ ನಗುಮುಖದಿಂದ ಸೇವೆಗೈಯಬೇಕು” ಎಂದರು.

ರೋಗಿಗಳು ಮತ್ತು ನಿರ್ಗತಿಕರ ಸೇವೆ ಮಾಡುವಾಗ ಸಂತ ಮದರ್ ತೆರೆಸಾ ಮತ್ತು ಫ್ಲೋರೆನ್ಸ್ ನೈಟಿಂಗೇಲ್ ಅವರು ತೋರಿದಂತಹ ತಾಳ್ಮೆ ಮತ್ತು ಸಹಿಷ್ಣುತೆ ಆಸ್ಪತ್ರೆ ಸಿಬ್ಬಂದಿಗೆ ಮಾದರಿಯಾಗಬೇಕು ಎಂದು ಸಚಿವ ನುಡಿದರು.

“ನೀವು ಆರೋಗ್ಯ ಸೇವೆ ಕ್ಷೇತ್ರದಲ್ಲಿ ಸೇವೆಗೈಯಲು ನಿಜವಾಗಿಯೂ ಪೂಜ್ಯನೀಯರಾಗಿದ್ದೀರಿ. ಇದು ನಿಜವಾಗಿಯೂ ಗೌರವಯುತ ಕೆಲಸವಾಗಿದೆ” ಎಂದು ವೈದ್ಯಕೀಯ ಸಿಬ್ಬಂದಿಯನ್ನು ಹುರಿದುಂಬಿಸಿದರು.

ಯಾರೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತಹ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಮಂಗಳೂರಿನಲ್ಲಿ ಗಣ್ಯರೂ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ದಿನಗಳು ದೂರವಿಲ್ಲ ಎಂದವರು, ವೆನ್ಲಾಕ್ ಆಸ್ಪತ್ರೆಯ ಆಯೂಷ್ ಘಟಕದ ಕಾರ್ಯವೈಖರಿ ಅತ್ಯುತ್ತಮವಾಗಿದೆ ಎಂದರು.