ಮನೆ ಕವಾಟದಲ್ಲಿದ್ದ ಎಟಿಎಂ ಕಾರ್ಡ್ ಕದ್ದು ಬ್ಯಾಂಕಿದ ಹಣ ಎಗರಿಸಿದ ಆಳು

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮನೆಯವರು ವಿದೇಶಕ್ಕೆ ಹೋಗಿದ್ದ ವೇಳೆ ಮನೆಯನ್ನು ನೋಡಿಕೊಳ್ಳಲು ಇದ್ದ ಮನೆಯ ಕೆಲಸದಾಳುವೇ ಮನೆಯ ಹಂಚು ತೆಗೆದು ಕಪಾಟಿನೊಳಗಿದ್ದ ಎಟಿಎಂ ಕಾರ್ಡ್ ಕಳವು ಮಾಡಿ ಕಪಾಟಿನಲ್ಲಿ ಬರೆದಿಟ್ಟಿದ್ದ ಎಟಿಎಂ ಕಾರ್ಡ್ ಪಿನ್‍ನಂಬ್ರ ಬಳಸಿ 61 ಸಾವಿರ ರೂಪಾಯಿ ಲಪಾಟಾಯಿಸಿದ ಬಗ್ಗೆ ದೂರಲಾಗಿದೆ.

ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹಾವಂಜೆ ಗ್ರಾಮದ ಕೀಳಿಂಜೆ ಎಂಬಲ್ಲಿ ನಡೆದಿದೆ. ಹಾವಂಜೆ ಗ್ರಾಮ ಕೀಳಿಂಜೆ ನಿವಾಸಿ ಸಿರಿಲ್ ಡಿಸೋಜಾ ಹೆಂಡತಿ ಹಿಲ್ದಾ ಡಿಸೋಜಾ 2016 ಆಗಸ್ಟ್ 19ರಿಂದ ಆಕ್ಟೋಬರ್ 20ರತನಕ ದುಬೈಗೆ ಹೋಗಿದ್ದು, ಮನೆ ಕಡೆ ನೋಡಿಕೊಳ್ಳಲು ವ್ಯಕ್ತಿಯೊಬ್ಬನನ್ನು ನಿಯುಕ್ತಿ ಮಾಡಿದ್ದರು.

ಹಿಲ್ದಾ ಡಿಸೋಜಾ ದುಬೈಯಿಂದ ವಾಪಾಸ್ಸು ಬಂದಾಗ ಮನೆಯ ಕೆಲಸದಾಳು ಸಂತೋಷನು ಮನೆಯ ಹಂಚು ತೆಗೆದು ಮನೆ ಒಳಗೆ ಪ್ರವೇಶಿಸಿ ಕಬ್ಬಿಣದ ಕಪಾಟಿನ ಬೀಗ ಮುರಿದು, ಕಪಾಟಿನಲ್ಲಿದ್ದ ಕೆನರಾ ಬ್ಯಾಂಕಿನ ಎಟಿಎಮ್ ಕಾರ್ಡ್‍ನ್ನು ಕಳವು ಮಾಡಿರುವುದು ಪತ್ತೆಯಾಗಿದೆ.  ಬಳಿಕ ಆರೋಪಿಯು ಕಪಾಟಿನಲ್ಲಿ ಬರೆದಿಟ್ಟಿದ್ದ ಎಟಿಎಮ್ ಪಿನ್ ಸಂಖ್ಯೆ ತಿಳಿದುಕೊಂಡು ಕಳವು ಮಾಡಿದ ಎಟಿಎಮ್ ಕಾರ್ಡ್ ಬಳಸಿ ಬೇರೆ ಬೇರೆ ಬ್ಯಾಂಕುಗಳ ಎ

ಟಿಎಮ್ ಮೂಲಕ 61,000 ರೂಪಾಯಿ ತೆಗೆದು ನಷ್ಟ ಉಂಟುಮಾಡಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.