ಒಕ್ಕೆತ್ತೂರಿನಲ್ಲಿ ಸರಣಿ ಕಳ್ಳತನ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಒಂದೇ ರಾತ್ರಿಯಲ್ಲಿ ಒಕ್ಕೆತ್ತೂರು ಎಂಬಲ್ಲಿ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸೊತ್ತುಗಳನ್ನು ಮತ್ತು ಹರಕೆ ಡಬ್ಬಗಳನ್ನು ದೋಚಿ ಪರಾರಿಯಾಗಿದ್ದಾರೆ.

ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಮಸೀದಿ ಬಳಿಯ ಅದ್ರಾಮ ಎಂಬವರ ಅಂಗಡಿ, ಒಕ್ಕೆತ್ತೂರು ಜಂಕ್ಷನ್ನಿನಲ್ಲಿರುವ ಮಹಮ್ಮದ್ ಎಂಬವರ ಅಂಗಡಿ, ಅಲ್ಲೇ ಪಕ್ಕದ ಲತೀಫ್, ಕೆ ಎಂ ಮಹಮೂದ್, ಅಬೂಬಕ್ಕರ್ ಮತ್ತು ಮೋನು ಎಂಬವರ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಚಿಲ್ಲರೆ ಹಣ, ಹರಕೆ ಡಬ್ಬಗಳನ್ನೂ ಬಿಡದ ಕಳ್ಳರು ಹಣ್ಣು ಹಂಪಲು ಸೇರಿದಂತೆ ಇನ್ನಿತರ ಸೊತ್ತುಗಳನ್ನು ದೋಚಿರುವುದು ಇವರು ಪುಡಿಗಳ್ಳರು ಎಂಬುದಕ್ಕೆ ಪುಷ್ಟಿ ನೀಡಿದೆ.ಕೆಲ ಸಮಯಗಳಿಂದ ವಿಟ್ಲ ಪರಿಸರದಲ್ಲಿ ತೆಪ್ಪಗಾಗಿದ್ದ ಪುಡಿಕಳ್ಳರ ಕಾಟ ಇದೀಗ ಮತ್ತೆ ಆರಂಭವಾಗಿರುವುದು ಅಂಗಡಿ ಮಾಲಿಕರ ಆತಂಕಕ್ಕೆ ಕಾರಣವಾಗಿದೆ.