ಕೋಡಿಜಾಲದಲ್ಲಿ ಸರಣಿ ಕಳವು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಕೋಡಿಜಾಲ್ ಪರಿಸರದ ಕೆಲವು ಮನೆಗಳಲ್ಲಿ  ತಡರಾತ್ರಿ ನುಗ್ಗಿದ ಕಳ್ಳರು ನಗ, ನಗದು ಕಳವು ಮಾಡಿದ್ದಾರೆ.

ಕೋಡಿಜಾಲ್‍ನಲ್ಲಿರುವ ಕೈರುನ್ನೀಸಾ, ಅಬ್ದುಲ್ಲ, ಉಸ್ಮಾನ್, ಮಹಮ್ಮದ್ ಮಸೂದ್ ಎಂಬವರ ಮನೆಗಳಲ್ಲಿ ಕಳ್ಳತನ ನಡೆದಿದ್ದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಅಬ್ದುಲ್ಲರವರ ಮನೆಯಿಂದ 120 ಗ್ರಾಂ ಚಿನ್ನ, ಉಸ್ಮಾನ್ ಅವರ ಮನೆಯಿಂದ 98,000 ರೂ ನಗದು ಹಾಗೂ ಚಿನ್ನ, ಮಹಮ್ಮದ್ ಮಸೂದ್ ಮನೆಯಿಂದ ಮಲಗಿದ್ದ ಮಗುವಿನ ಕಾಲಿನ ಚೈನ್ ಕಳವಾಗಿದೆ.