ಕಾರು ಟಯರ್ ಸ್ಫೋಟ : ಸರಣಿ ಅಪಘಾತ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಾರಿನ ಟಯರ್ ಸ್ಫೋಟಗೊಂಡ ಪರಿಣಾಮ ರಸ್ತೆ ಬದಿ ಪಾರ್ಕಿಂಗ್ ಮಾಡಿದ್ದ ಕಾರು, ಎರಡು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ ಘಟನೆ ಸೋಮವಾರ ಸಂಜೆ ಕಡಿಯಾಳಿ ಸೋನಿ ಶೋರೂಂ ಮುಂಭಾಗ ನಡೆದಿದೆ.

ಕಾಸರಗೋಡು ಕುಟುಂಬ ಮಾರುತಿ ಇಕೋ ಕಾರಿನಲ್ಲಿ ಮಣಿಪಾಲದಿಂದ ಬಜ್ಪೆ ಕಡೆಗೆ ಕಡಿಯಾಳಿ ಮಾರ್ಗವಾಗಿ ಹೋಗುತ್ತಿತ್ತು.   ಕಾರಿನ ಟಯರ್ ಸ್ಫೋಟಗೊಂಡು ಚಾಲಕ ಉಮರ್ ಎಂಬಾತನ ನಿಯಂತ್ರಣ ತಪ್ಪಿದ ಕಾರು ಸರಣಿ ಅಪಘಾತಕ್ಕೆ ಕಾರಣವಾಗಿದೆ.

ಈ ಸಂದರ್ಭ ಸ್ಕೂಟಿ ಮತ್ತು ಬೈಕ್ ಕಾರಿನಡಿ ಸಿಲುಕಿದೆ. ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿ ರಭಸಕ್ಕೆ ಸೆಲೆರಿಯೋ ಹಿಂಬದಿ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಇಕೋ ಕಾರಿನಲ್ಲಿದ್ದ ಕಾಸರಗೋಡು ಮೂಲದ ಕಾರು ಚಾಲಕ ಉಮರ್ ಹಾಗೂ ವೃದ್ಧೆಯೊಬ್ಬರು ಗಾಯಗೊಂಡಿದ್ದಾರೆ. ಈ ಸರಣಿ ಅಪಘಾತಕ್ಕೆ ಇಕೋ ಕಾರು ಚಾಲಕನ ಬೇಜವಾಬ್ದಾರಿಯೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಪೆÇಲೀಸರು ಆಗಮಿಸಿ  ಪ್ರಕರಣ ದಾಖಲಿಸಿದ್ದಾರೆ.


ಆಸ್ಪತ್ರೆ ಕಟ್ಟಡದ ಕೊಠಡಿಯಲ್ಲಿ ಬೆಂಕಿ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಇಲ್ಲಿನ ಬನ್ನಂಜೆಯ ಮಂಜುನಾಥ ಕಣ್ಣಿನ ಆಸ್ಪತ್ರೆ ಕಟ್ಟಡದ ಮೇಲ್ಭಾಗದಲ್ಲಿ ಕೊಠಡಿಯಲ್ಲಿ ಸೋಮವಾರ ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕದ ಅನ್ನಪೂರ್ಣ ಎಂಬವರ ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಕೊಠಡಿಯಲ್ಲಿದ್ದ ಬಟ್ಟೆಬರೆಗಳು, ಬ್ಯಾಂಕ್ ಪಾಸ್ಬುಕ್, ನಗದು ಬೆಂಕಿಗಾಹುತಿಯಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.