ಮುಂಬೈಯಲ್ಲಿ ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರಾಗೆ ಸಮ್ಮಾನ

ಮುಂಬೈ : `ಛಾಯಾಕಿರಣ’ ಕನ್ನಡ ಮಾಸಿಕದ ಮೂರನೇ ವಾರ್ಷಿಕೋತ್ಸವ ಸಮಾರಂಭವು ಕಲ್ಯಾಣ್ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಜರಗಿದ್ದು ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರ ಅವರಿಗೆ,  ಗಣ್ಯರ ಸಮ್ಮುಖದಲ್ಲಿ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟಿ ಅವರು ಮಾತನಾಡಿತ್ತಾ,  “ಒಂದು ಪತ್ರಿಕೆಯ ಸಂಪಾದಕೀಯವು ಆ ಪತ್ರಿಕೆಯ ಸ್ಥಾನಮಾನವನ್ನು ಉಳಿಸಿ ಬೆಳೆಸುತ್ತದೆ” ಎಂದರು. ಮುಖ್ಯ ಅತಿಥಿಯಾಗಿ  ಹಿರಿಯ ಸಾಹಿತಿ ಡಾ| ಸುನೀತಾ ಎಂ ಶೆಟ್ಟಿ ಅವರು ಮಾತನಾಡಿ, ಮಾಸಪತ್ರಿಕೆಗಳು ಸುದ್ದಿಗಿಂತ ಸಾಹಿತ್ಯಕ್ಕೆ ಹೆಚ್ಚು ಒತ್ತು ನೀಡುತ್ತಿವೆ.  ಇಂತಹ ಪತ್ರಿಕೆಗಳು ಲೇಖಕರನ್ನು ಬೆಳೆಸುತ್ತವೆ ಎಂದರು.

ಪತ್ರಿಕೆಯ ಸಂಪಾದಕ ಪ್ರಕಾಶ್ ಕುಂಠಿನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,  “ಮಹಾನಗರದಲ್ಲಿ 25 ವರ್ಷಗಳಿಗೂ ಮಿಕ್ಕಿ ಪತ್ರಿಕೋದ್ಯಮದಲ್ಲಿರುವ ಮುಂಬಯಿ ನ್ಯೂಸ್ ಸುದ್ದಿ ಸಂಪಾದಕರಾಗಿ ಹೆಸರುವಾಸಿಯಾಗಿರುವ ಹೇಮರಾಜ್ ಕರ್ಕೇರ ಅವರನ್ನು ಗೌರವಿಸಲು ಅರ್ಹವಾದ ವ್ಯಕ್ತಿ ಎಂದು ತಿಳಿದು, ಆಯ್ಕೆಮಾಡಿ ಸಮ್ಮಾನಿಸಿದ್ದೇವೆ” ಎಂದು ಹೇಳಿದರು.