ಹಿರಿಯ ನಾಗರಿಕರಿಗೆ ಬಸ್ ದರದಲ್ಲಿ ರಿಯಾಯ್ತಿ ಕೊಡಿ

ಸಾಂದರ್ಭಿಕ ಚಿತ್ರ

ನಾನೋರ್ವ, ಮಧ್ಯಮ ವರ್ಗಕ್ಕೆ ಸೇರಿದ ಹಿರಿಯ ನಾಗರಿಕ. ಜೀವನದ ಮುಸ್ಸಂಜೆಯನ್ನು ಕಾಣುತ್ತಿರುವವನು. ಸರಕಾರದ ವತಿಯಿಂದ ಹಿರಿಯ ನಾಗರಿಕನಿಗೆ ಸಿಗುತ್ತಿರುವ ಕೆಲ ಸೌಲಭ್ಯವನ್ನು ನಾನೂ ಪಡೆಯುತ್ತಿದ್ದೇನೆ. ಅವುಗಳಲ್ಲಿ ಒಂದಾಗಿರುವುದು ಸರಕಾರಿ ಬಸ್ಸುಗಳಲ್ಲಿ ಸಿಗುತ್ತಿರುವ ಬಸ್ ದರ ರಿಯಾಯಿತಿ. ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ನಮಗೆ, ಪ್ರಯಾಣಕ್ಕಾಗಿ ಹೆಚ್ಚಾಗಿ ಖಾಸಗಿ ಬಸ್ಸುಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ. ಆದರೆ ಈ ಬಸ್ಸುಗಳಲ್ಲಿ  ಹಿರಿಯ ನಾಗರಿಕರಿಗಾಗಿ ಬಸ್ ದರಗಳಲ್ಲಿ ರಿಯಾಯಿತಿ ಇಲ್ಲ.

ದಿನಗಳು ಕಳದಂತೆ ಸರಕಾರಿ/ಖಾಸಗಿ ಬಸ್ಸುಗಳ ಪ್ರಯಾಣ ದರ ಏರುತ್ತಲೇ ಇದೆ. ಇದರ ಬಿಸಿಯೂ ನಮಗೂ ತಟ್ಟಿದೆ. ಹಿರಿಯ ನಾಗರಿಕರು ತಮ್ಮ ನಿವೃತ್ತಿ ಜೀವನವನ್ನು ತಮ್ಮ ಮಕ್ಕಳ ಭರವಸೆಯಲ್ಲಿಯೋ, ಪೆನ್ಶನ್ ಹಣದಿಂದಲೋ ಕಳೆಯುವವರು.

ಹಿರಿಯ ನಾಗರಿಕರಿಗೂ ದಯಮಾಡಿ ಬಸ ದರಗಳಲ್ಲಿ ರಿಯಾಯಿತಿ ಮೂಲಕ ನಮಗೂ ಸಹಾಯ ಹಸ್ತ ನೀಡಿರಿ. ನಮಗೆ ಈ ರಿಯಾಯಿತಿಯನ್ನು ದಯಪಾಲಿಸಿದ್ದಲ್ಲಿ, ನಿಮ್ಮ ಉದಾರತೆಯ ಫಲವಾಗಿ ಎಲ್ಲಾ ಹಿರಿಯರ ಮುಖಗಳಲ್ಲಿಯೂ ಸಂತಸದ ಮುಗುಳ್ನಗೆಯು ಮೊಳಗಲು ಖಂಡಿತಾ ಸಾಧ್ಯ ಮಾತ್ರವಲ್ಲ. ನಿಮ್ಮ ಈ ದಿಟ್ಟ ಹೆಜ್ಜೆ ಎಲ್ಲರ ಪ್ರಶಂಸೆಗೆ ಪಾತ್ರವಾಗುವುದರಲ್ಲಿ ಸಂಶಯವಿಲ್ಲ. ಇದು ದೇಶದ ಇತರ ಭಾಗಗಳಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಬಸ್ ಮಾಲಕರ ಸಂಘಗಳಿಗೆ ಒಂದು ಸ್ಬಾಗತಾರ್ಹ ಉದಾಹರಣೆ ಆಗಬಲ್ಲದು.

  • ಫ್ರಾನ್ಸಿಸ್ ಬಿ ಸಲ್ದಾನ್ಹಾ, ಮಂಗಳೂರು