ವ್ಯಸನಮುಕ್ತ ಮಂಜೇಶ್ವರ ಸಂಕಿರಣ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವ್ಯಸನಮುಕ್ತ ಮಂಜೇಶ್ವರ ಎಂಬ ಯೋಜನೆಯ ಭಾಗವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತು ಸಭಾಭವನದಲ್ಲಿ ವಿಚಾರ ಸಂಕಿರಣ ನಡೆಸಲಾಯಿತು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಬ್ಲಾಕ್ ಪಂಚಾಯತು ಅಧ್ಯಕ್ಷ ಎ ಕೆ ಎಂ ಅಶ್ರಫ್, “ಮಾದಕ ವ್ಯಸನಗಳು ಎಳೆಯ ಹಾಗೂ ಯುವಕರನ್ನು ಅಡ್ಡದಾರಿಗೆಳೆ ಯುತ್ತವೆ. ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗುವ ಹಲವರು ಮಾದಕ ವ್ಯಸನಗಳಿಗೆ ದಾಸರಾಗಿರುತ್ತಾರೆ. ಉತ್ತಮ ಆರೋಗ್ಯಪೂರ್ಣ ಸಮಾಜವನ್ನು ರೂಪಿಸಿ ಮುನ್ನಡೆಸುವ ಜವಾಬ್ದಾರಿ ಶಾಲೆ ಸಹಿತ ಸಮಾಜಮುಖಿ ಸಂಘ ಸಂಸ್ಥೆಗಳ ಗುರುತರ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.