ವಂಡ್ಸೆ ಹೊಳೆಯಲ್ಲಿ ವಿವಾಹಿತ ಮಹಿಳೆಯ ಅರೆನಗ್ನ ಶವ ಪತ್ತೆ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ವಿವಾಹಿತ ಮಹಿಳೆ ಶವವು ಕುಂದಾಪುರ ತಾಲೂಕಿನ ವಂಡ್ಸೆ ಸಮೀಪದ ಚಕ್ರಾ ನದಿಯಲ್ಲಿ ಪತ್ತೆಯಾಗಿದೆ. ಮೃತಳು ಸ್ಥಳೀಯ ನಿವಾಸಿ ರವಿ ಪೂಜಾರಿ ಎಂಬಾತನ ಪತ್ನಿ ಸುಪ್ರಿತಾ ಪೂಜಾರಿ (24) ಎಂದು ಗುರುತಿಸಲಾಗಿದೆ.

28knd1

ಸುಪ್ರಿತಾ ಪೂಜಾರಿ ಮೂಲತಃ ನೇರಳಕಟ್ಟೆಯವಳಾಗಿದ್ದು, ಎಂಟು ವರ್ಷಗಳ ಹಿಂದೆ ಕೇಬಲ್ ಆಪರೇಟರ್ ಆಗಿರುವ ರವಿ ಪೂಜಾರಿಯನ್ನು ಪ್ರೀತಿಸಿ ವಿವಾಹವಾಗಿದ್ದಳೆನ್ನಲಾಗಿದೆ. ಇವರಿಗೆ ನಾಲ್ಕು ವರ್ಷ ಪ್ರಾಯದ ಮಗುವೂ ಇದೆ. ವಿವಾಹದ ನಂತರವೂ ಈಕೆ ಕುಂದಾಪುರ ಮೂಲದ ವ್ಯಕ್ತಿಯೊಬ್ಬನೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದೆಳ್ಳನ್ನಲಾಗಿದ್ದು ತಿಂಗಳ ಹಿಂದೆ ಸುಪ್ರಿತಾ ಪೂಜಾರಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಮನೆಯವರು ಪೊಲೀಸ್ ದೂರು ನೀಡಿದ್ದು, ಮೂರು ದಿನಗಳ ಬಳಿಕ ಲಾಡ್ಜೊಂದರಲ್ಲಿದ್ದವರನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯ ಗಂಡನ ಮನೆಗೊಪ್ಪಿಸಿದ್ದರು. ಭಾನುವಾರ ತಡರಾತ್ರಿ ಗಲಾಟೆಯಾಗಿದ್ದು, ಸುಪ್ರಿತಾ ಪೂಜಾರಿ ಮನೆ ಬಿಟ್ಟು ಹೋಗಿದ್ದು ನಾಪತ್ತೆಯಾಗಿದ್ದಳು ಎಂಬುದಾಗಿ ಆಕೆಯ ಮನೆಯವರು ಪೊಲೀಸ್ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಸೋಮವಾರ ಬೆಳಿಗ್ಗೆ ಆಕೆಯ ಅರೆನಗ್ನ ದೇಹ ಸಮೀಪದ ಚಕ್ರಾ ನದಿಯಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಆಕೆಯ ಗುರುತು ಹಿಡಿದು ಮನೆಯವರಿಗೆ ಸುದ್ದಿ ಮುಟ್ಟಿಸಿದ್ದು, ಪ್ಯಾಂಟ್ ಮತ್ತು ಒಳ ಉಡುಪು ಮಾತ್ರ ಧರಿಸಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತದೇಹವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಶವಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಆದರೆ ಕೊಲ್ಲೂರು ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.