ರಾಘವೇಶ್ವರ ಸ್ವಾಮಿಯ ಮಂಗಲ ಗೋ ಯಾತ್ರೆ ಯ ಉದ್ದೇಶ ಸ್ವಾರ್ಥ ಸಾಧನೆ

ರಾಮಚಂದ್ರಾಪುರ ಮಠದ ಹೆಸರಿನಲ್ಲಿ ಪ್ರಸಕ್ತ ಪೀಠಾಧಿಪತಿ ರಾಘವೇಶ್ವರ ಸ್ವಾಮಿ  ಮಂಗಲ ಗೋಯಾತ್ರೆ  ಎಂಬ ಹೆಸರಿನ ಒಂದು ಯಾತ್ರೆ ನಡೆಸುತ್ತಿದ್ದಾರೆ
ನವೆಂಬರ್ 8ರಿಂದ 29ರವರೆಗೆ ಈ ಯಾತ್ರೆ ಗೋರಕ್ಷಣೆಗಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ  ಜನವರಿ 27 28 29ರಂದು ಮಂಗಳೂರಲ್ಲಿ ಇದರ ಸಮಾರೋಪಕ್ಕೆ ಭಾರೀ ಜನರನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ
ಏಳು ವರ್ಷಗಳ ಹಿಂದೆ  ವಿಶ್ವ ಮಂಗಲ ಗೋಗ್ರಾಮ ಯಾತ್ರೆ ಯ ಪಡಿಯಚ್ಚಾಗಿ ಈ ಯಾತ್ರೆಯನ್ನು ಮಾಡಿದಂತಿದೆ
ವಿಪರ್ಯಾಸವೆಂದರೆ ಅಂದಿನ ಗೋಗ್ರಾಮ ಯಾತ್ರೆಯನ್ನು  ರಾಷ್ಟ್ರೀಯ ಸ್ವಯಂಸೇವಕ ಸಂಘ ವು ಗೋರಕ್ಷಣೆಗಾಗಿ ಕೈಗೆತ್ತಿಕೊಂಡಿದ್ದರೆ ಇಂದು ರಾಘವೇಶ್ವರ ಸ್ವಾಮಿ ಗೋವಿನ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ಈ ಯಾತ್ರೆಯನ್ನು ಹಮ್ಮಿಕೊಂಡಿರುವುದು ಸರ್ವ ವೇದ್ಯ
ಸನ್ಯಾಸ ಧರ್ಮಕ್ಕೆ ವಿರುದ್ಧವಾದ ಜೀವನ ಶೈಲಿಯನ್ನು ಅವರು ಅನುಸರಿಸುತ್ತಿರುವುದು ಸರ್ವವಿದಿತವಾದ ನಂತರ ಈ ಯಾತ್ರೆಯಲ್ಲಿ  ರಾಷ್ಟ್ರೀಯ ಸ್ವಯಂ ಸೇವಕ ಸಂಘ  ತನ್ನ ದೂರವನ್ನು ಕಾದುಕೊಂಡಿದೆ  ವಿಶ್ವಮಂಗಲ ಗೋಗ್ರಾಮಯಾತ್ರೆಯಲ್ಲಿ ಕರ್ನಾಟಕದ ಎಲ್ಲ ಮಠಗಳು ಗೋರಕ್ಷಣೆಗಾಗಿ ಭಾಗವಸಿದ್ದರೆ ಈ ಯಾತ್ರೆಯಲ್ಲಿ ತಮ್ಮ ಅಂತರವನ್ನು ಕಾಯ್ದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾರಿಗೆ ಇವರ ವಿಚಾರ ಸಂಪೂರ್ಣ ತಿಳಿದಿಲ್ಲವೋ  ಯಾರು ಇವರಂತೆ ಪ್ರಚಾರ ಪ್ರಿಯರೋ  ಯಾರು ಗೋವಿನ ಹೆಸರನ್ನು ತಮ್ಮ ಸ್ವಾರ್ಥತಕ್ಕಾಗಿ ಬಳಸುತ್ತಾರೋ ಹಾಗೂ ಯಾರು ವೋಟ್ ಬ್ಯಾಂಕಿಗಾಗಿ ಸತ್ಯವನ್ನು ಮರೆಮಾಚಿ ಅಧರ್ಮ ಅಸತ್ಯದ ಜತೆ ಕೈ ಜೋಡಿಸಲು ಸಿದ್ಧರಿದ್ದಾರೋ ಅಂಥಹವರೆಲ್ಲಾ ಸದ್ಯದ ಗೋ ಯಾತ್ರೆಗೆ ಸಹಕಾರ ಬೆಂಬಲ ನೀಡುತ್ತಿದ್ದಾರೆ
ಜನತೆಗೆ ಸತ್ಯ ತಿಳಿದಿರಬೇಕು  ನ್ಯಾಯಾಲಯ ಅವರಿಂದ ಅತ್ಯಾಚಾರ ನಡೆದಿಲ್ಲ ಎಂದುದರ ಜತೆಯಲ್ಲೇ  ಅವರೀಗೆ ಮಹಿಳೆಯ ಜತೆ ಅನೈತಿಕ ಸಂಬಂಧ ಇತ್ತು ಎಂದು ಹೇಳಿದೆ  ಮೊಕದಮ್ಮೆ ಈಗ ಕರ್ನಾಟಕ ಉಚ್ಛ ನ್ಯಾಯಾಲದಲ್ಲಿದೆ
ತಮ್ಮ ವಿರುದ್ಧ ಇರುವ ಲೈಂಗಿಕ ಕಿರುಕುಳದ ದೂರುಗಳು ಇನ್ನೂ ನ್ಯಾಯಾಲದಲ್ಲಿರುವಾಗಲೇ  ಜನರ ಗಮನ ಬೇರೆಡೆಗೆ ಸೆಳೆಯಲು ಮಾಡಿದ ಈ ತಂತ್ರದ ಮರ್ಮವನ್ನು ಜನರು ಅರಿಯಬೇಕು ಮತ್ತು ಇಂಥಾ ಆಷಾಢಭೂತಿತನಕ್ಕೆ ಮರುಳಾಗಿ ಗೋವಿನ ಹೆಸರಿನ ದುರುಪಯೋಗ ಮಾಡಬಾರದಾಗಿ ವಿನಂತಿಸುತ್ತೇವೆ

  • ಎಂ ಎನ್ ಭಟ್ ಮದ್ಗುಣಿ                                                                                                        ಅಧ್ಯಕ್ಷ  ಹವ್ಯಕ ಒಕ್ಕೂಟದ ಪರವಾಗಿ                                                                                      ಬೆಂಗಳೂರು