ಸೆಲ್ಫೀ ತೆಗೆಯುತ್ತಿದ್ದ ಮಹಿಳೆ ಮೊಸಳೆ ಬಾಯಿಗೆ ಬಿದ್ದಳು

ಸಾಂದರ್ಭಿಕ ಚಿತ್ರ

ಬ್ಯಾಂಕಾಕ್ : ಥಾಯ್ಲಾಂಡಿನ ಖಾವೊ ಯೈ ನ್ಯಾಷನಲ್ ಪಾರ್ಕಿಗೆ ವಿಹಾರಕ್ಕೆ ಬಂದಿದ್ದ 41 ವರ್ಷದ ಫ್ರೆಂಚ್ ಮಹಿಳೆ ಮೊಸಳೆ ಪಕ್ಕದಲ್ಲಿ ಸೆಲ್ಫೀ ತೆಗೆಯಲು ಹೋಗಿ ಮೊಸಳೆ ಬಾಯಿಗೆ ಬಿದ್ದಿದ್ದಾಳೆ.

ಮರಿಯೆಲ್ ಬೆನೆಟುಲಿಯೆರ್ ಎಂಬ ಮಹಿಳೆ ಮೊಸಳೆ ಜೊತೆಗೆ ಸೆಲ್ಫೀ ತೆಗೆಯಲು ಬಯಸಿ ಮೊಸಳೆ ಪಕ್ಕದಲ್ಲಿ ಪೋಸು ಕೊಟ್ಟು ಫೊಟೊ ಕ್ಲಿಕ್ಕಿಸಲು ಸಿದ್ದಳಾಗಿದ್ದಳು. ಇನ್ನೇನು ಫೊಟೊ ತೆಗೆಯಬೇಕೆನ್ನುವಷ್ಟರಲ್ಲಿ ಆಕೆಯ ಎಡಕಾಲನ್ನು ಮೊಳೆ ಅಮುಕಿಕೊಂಡು ಆಕೆ ಜಾರಿಬಿದ್ದಳು. ಅದೃಷ್ಟವಶಾತ್ ಮಹಿಳೆಯನ್ನು ಮೊಸಳೆ ಬಿಟ್ಟಿದ್ದು, ತಕ್ಷಣ ಆಕೆಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಮಹಿಳೆಯ ಕಾಲಿಗೆ ಬಲವಾದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪಾರ್ಕಿನ ಅಧಿಕಾರಿಗಳು ತಿಳಿಸಿದ್ದಾರೆ.