ಮಹಿಳೆಯರ ಸ್ವಯಂ ರಕ್ಷಣಗೆ ಯೋಜನೆ

ಎಡಿಜಿಪಿ ಪಿ ಸಂಧ್ಯಾ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಹಿಳೆಯರು ಸ್ವಯಂ ರಕ್ಷಣಗೆ ಯೋಜನೆ ಹಮ್ಮಿಕೊಳ್ಳಲಾಗಿದೆಯೆಂದು ಹಾಗೂ ಇದಕ್ಕೆ ಧರ್ಮದ ಚೌಕಟ್ಟಿನಿಂದ ಹೊರ ಬಂದು ಮಹಿಳೆಯರು ಒಗ್ಗೂಡಬೇಕಾದ ಅನಿವಾರ್ಯತೆ ಇರುವುದಾಗಿ ಎಡಿಜಿಪಿ ಹಾಗೂ ಪ್ರಾಂತ್ಯ ನೋಡಲ್ ಅಧಿಕಾರಿ ಪಿ ಸಂಧ್ಯಾ ಅಭಿಪ್ರಾಯಪಟ್ಟರು.

ಪೆÇಲೀಸ್ ಜನಮೈತ್ರಿ ಸುರಕ್ಷದಂಗವಾಗಿ ಕಾಸರಗೋಡು ಸರ್ವೀಸ್ ಕೋ-ಆಪರೇಟಿವ್ ಸೊಸೈಟಿ ಸಂಭಾಂಗಣದಲ್ಲಿ ನಡೆದ ಮಹಿಳೆಯರ ಒಕ್ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಹಿಳೆಯರು ಸವಾಲುಗಳನ್ನು ದಿಟ್ಟತನದಿಂದ ಎದುರಿಸಲು ಇಂತಹ ಕೂಡುವಿಕೆ ಅನಿವಾರ್ಯ ಎಂದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಬೀಫಾಯಿಮ ಇಬ್ರಾಹಿಂ, ಪೆÇಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡರು.