ಅಪ್ರಾಪ್ತೆ ಅತ್ಯಾಚಾರಗೈದ ಸೀಟಿವಾಲೆ ಬಾಬಾ ಬಂಧನ

ಮುಂಬೈ : ಪರಿಸರದಲ್ಲಿ `ಸೀಟಿವಾಲೆ ಬಾಬಾ’ ಎಂದು ಹೆಸರುವಾಸಿಯಾಗಿದ್ದ ಸ್ವಯಂ ಘೋಷಿತ ದೇವಮಾನವ ಗುಲಾಂ ಮೊಹಮ್ಮದ್ ರಫೀಕ್ ಶೇಖ್ (60) ಎಂಬವನನ್ನು ಕಟ್ಟೆಕಡೆಗೂ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಈತ ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ.

ದರ್ಗಾವೊಂದರಲ್ಲಿ ಈತ ಅಪ್ರಾಪ್ತ ಬಾಲಕಿಯ ಅತ್ಯಾಚಾರಗೈದಿದ್ದ. ಈತನನ್ನು ಪೊಲೀಸರು ಡಿ 23ರಂದು ಬಂಧಿಸಿದ್ದಾರೆ. ಈತ ಬೈಂಗನ್ವಾಡಿಯ ನಿವಾಸಿಯಾಗಿದ್ದು, ಕರ್ಬಾಲ ಮೈದಾನದ ಹತ್ತಿರದಲ್ಲಿರುವ ದರ್ಗಾದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ. ಈಗ ಯಾವಾಗಲೂ ದರ್ಗಾದ ಆವರಣದಲ್ಲಿ ತಾನೊಂದು `ಜನ’ ಎಂದು ತೋರಿಸಲು ಸೀಟಿ ಊದುತ್ತಿದ್ದ. ಕಾರಣ, ಈತನಿಗೆ ಸೀಟಿವಾಲಾ ಬಾಬಾ ಎಂಬ ಹೆಸರು ಬಂದಿದೆ.