ನಾಪತ್ತೆಯಾದ ಗೃಹಿಣಿ ಪತ್ತೆಗಾಗಿ ತೀವ್ರ ಶೋಧ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ನಾಪತ್ತೆಯಾದ ಗೃಹಿಣಿಯನ್ನು ಪತ್ತೆಹಚ್ಚಲು ಪೆÇಲೀಸರು ಶೋಧ ತೀವ್ರಗೊಳಿಸಿದ್ದಾರೆ. ಕುಂಬಳೆ ಕೊಯಿಪ್ಪಾಡಿ ಕಡಪ್ಪುರದ ವೇಣುಗೋಪಾಲ ಎಂಬವರ ಪತ್ನಿ ಸುಜಾತ (38) ಅಕ್ಟೋಬರ್ 11ರಂದು ನಾಪತ್ತೆಯಾಗಿದ್ದಾರೆ. ಅಂದು ಬೆಳಿಗ್ಗೆವರೆಗೆ ಮನೆಯಲ್ಲಿದ್ದ ಅವರು ದಿಢೀರ್ ನಾಪತ್ತೆಯಾಗಿದ್ದಾರೆಂದು ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಕುಂಬಳೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಮಾಹಿತಿ ಲಭಿಸಿಲ್ಲವೆಂದು ಪೆÇಲೀಸರು ತಿಳಿಸಿದ್ದಾರೆ.