`ಕರ್ನಾಟಕ ಕಡಲ್ಕೊರೆತ ವರದಿ ಕೇಂದ್ರ ಸರ್ಕಾರಕ್ಕೆ ಒಪ್ಪಿಸುತ್ತೇನೆ’

ನಮ್ಮ ಪ್ರತಿನಿಧಿ ವರದಿ

ಉಡುಪಿ : “ಕರಾವಳಿ ವಲಯದಲ್ಲಿ ಕಾಣಿಸಿಕೊಂಡಿರುವ ಕಡಲ್ಕೊರೆತವು ಹಲವು ಭಾಗಗಳಲ್ಲಿ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಕಡಲ್ಕೊರೆತ ಸಮಸ್ಯೆಗೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ. ಕರಾವಳಿ ಕರ್ನಾಟಕದ ಕಡಲ್ಕೊರೆತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಿದ್ದೇನೆ” ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕರಾವಳಿ ವಲಯದ ಅಪಾಯಕಾರಿ ಸ್ಥಳಗಳನ್ನು ಪರಿಶೀಲನೆ ನಡೆಸಿದ ಬಳಿಕ ವರದಿಯನ್ನು ಕೇಂದ್ರ ಸರ್ಕಾರದ ಮುಂದೆ ಸಲ್ಲಿಸುತ್ತೇನೆ” ಎಂದು ಹೇಳಿದರು.

ಧೀರ್ಘಕಾಲಿಕ ಕಡ ಲ್ಕೊರೆತ ಪ್ರಕರಣವನ್ನು ಪ್ರತಿವರ್ಷ ರಾಜಕೀಯ ಪ್ರತಿನಿಧಿಗಳು ವೀಕ್ಷಿಸುತ್ತಿದ್ದರೂ ಇದುವರೆಗೆ ಇದಕ್ಕೆ ಪರಿಹಾರ ದೊರೆತಿಲ್ಲ ಎಂಬ ವಿಚಾರವನ್ನು ಸಚಿವರ ಗಮನಕ್ಕೆ ತಂದಾಗ, ಈ ಬಾರಿ ಹಾಗಾಗಲಾರದು, ತಜ್ಞರ ತಂಡವನ್ನು ಕಡಲ್ಕೊರೆತ ಪೀಡಿತ ಸ್ಥಳಗಳಿಗೆ ಕಳುಹಿಸಿ ಅವರು ತಯಾರಿಸಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು.