ಮಂಜೇಶ್ವರ ಪರಿವಾರ ಮುಖಂಡನನ್ನು ಬಶೀರ್ ಕೊಲೆ ಪ್ರಕರಣದಲ್ಲಿ ತನಿಖೆಗೊಳಪಡಿಸಬೇಕು

ಎಸ್ಡಿಪಿಐ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಂಗಳೂರು ಕೊಟ್ಟಾರ ಚೌಕಿಯಲ್ಲಿ ನಡೆದ ಬಶೀರ್ ಹತ್ಯೆಯಲ್ಲಿ ಮಂಜೇಶ್ವರದ ಸಂಘ ಪರಿವಾರದ ಕೈವಾಡದ ಕುರಿತು ತನಿಖೆ ನಡೆಸಬೇಕೆಂದು ಎಸ್ಡಿಪಿಐ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ. ಬಶೀರ್ ಹತ್ಯೆಯಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳು ಕಾಸರಗೋಡು ಜಿಲ್ಲೆಯವರಾಗಿದ್ದಾರೆ, ಇದು ಜಿಲ್ಲೆಯ ನಾಯಕರ ಕೈವಾಡದ ಬಗ್ಗೆ ಶಂಕೆ ಮೂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರದ ಸಂಘ ಪರಿವಾರದ ಮುಖಂಡರನ್ನು ತನಿಖೆಗೊಳಪಡಿಸಿದ್ದಲ್ಲಿ ಕೊಲೆ ಸಹಿತ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆದÀ ಆಕ್ರಮಣದ ಕುರಿತು ಹೆಚ್ಚಿನ ಮಾಹಿತಿ ದೊರೆಯಬಹುದೆಂದು ಎಸ್ಡಿಪಿಐ ತಿಳಿಸಿದೆ.

ಬಶೀರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಉಪ್ಪಳ ಅಂಬಾರಿನ ಶ್ರೀಜು ಯಾನೆ ಪಿ ಕೆ ಶ್ರೀಜಿತ್, ಮಂಜೇಶ್ವರ ಕುಂಜತ್ತೂರಿನ ಸಂದೇಶ್ ಜಿಲ್ಲೆಯಲ್ಲಿ ಹಾಗೂ ಮಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಇತ್ತೇಚೆಗಷ್ಟೇ ಕುಂಜತ್ತೂರಿನಲ್ಲಿ ಬಣವೊಂದರ ಪತಾಕೆಯನ್ನು ಹಾಡಹಗಲೇ ಕಿಚ್ಚಿಟ್ಟು ಕೋಮು ಸಂಘರ್ಷ ಉಂಟು ಮಾಡಲು ಯತ್ನಿಸಿದ ಸಂಘ ಇದಾಗಿದೆಯೆಂದು ಪೆÇಲೀಸರು ಮುನ್ನೆಚ್ಚರಿಕೆಯಿಂದ ಕಾರ್ಯಾಚರಿಸಬೇಕೆಂದು ಎಸ್ಡಿಪಿಐ ಹೇಳಿದೆ.

LEAVE A REPLY