ಪತ್ರಕರ್ತರಿಗೆ ರಕ್ಷಣೆ ನೀಡಲು ಒತ್ತಾಯ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಬೆಳ್ತಂಗಡಿ ಕೊಕ್ಕಡದಲ್ಲಿ ಪತ್ರಕರ್ತ ಸುಬ್ರಹ್ಮಣ್ಯ ಶಗ್ರಿತ್ತಾಯರ ಮೇಲೆ ನಡೆದ ಹಲ್ಲೆಯನ್ನು ದಲಿತ್ ಸೇವಾ ಸಮಿತಿ ಉಗ್ರವಾಗಿ ಖಂಡಿಸಿದೆ. ಹಲ್ಲೆಗೈದ ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಿ ಬಂಧಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾ ದಲಿತ ಸೇವಾ ಸಮಿತಿ ಮುಖಂಡ ಸೇಸಪ್ಪ ಬೆದ್ರಕಾಡು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.