ಸ್ಕೌಟ್ಸ್ ಶಿಬಿರ ಉಜ್ವಲ ಭವಿಷ್ಯಕ್ಕೆ ಸಹಕಾರಿ ಡಾ ಸುಕುಮಾರನ್

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಸ್ಕೌಟ್ಸ್ ಎಂಡ್ ಗೈಡ್ಸ್ ತರಬೇತಿ ಶಿಬಿರಗಳು ಸೇವಾ ಮನೋಭಾವದ ಜೊತೆಗೆ ಜೀವನಾನುಭವಗಳನ್ನು ಕಲಿಸುತ್ತದೆ. ಎಳೆ ವಯಸ್ಸಿನಲ್ಲಿ ಡೇರೆಯೊಳಗೆ ವಾಸಿಸಿ ಸ್ವಂತಹ ಅಡುಗೆ ತಯಾರಿಸಿ ತಿನ್ನುವ ಉಣ್ಣುವ ಅನುಭವ ಜೀವನಕ್ಕೆ ದಾರಿ ದೀಪವಾಗುತ್ತದೆ. ಇಲ್ಲಿ ಕಲಿತ ವಿದ್ಯೆ, ಈ ಜಿಲ್ಲಾ ಮಟ್ಟದ ಸ್ಕೌಟ್ಸ್ ಶಿಬಿರದಲ್ಲಿ ಪಡೆದ ಅನುಭವ, ಜೀವನ ಪೂರ್ತಿ ಮಾರ್ಗದರ್ಶನ ನೀಡಬಲ್ಲದು, ಎಂದು ಸ್ಕೌಟ್ಸ್ ಎಂಡ್ ಗೈಡ್ಸ್ ರಾಷ್ಟ್ರೀಯ ನಿರ್ದೇಶಕ ಡಾ ಸುಕುಮಾರನ್ ನುಡಿದರು.
ಅವರು ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಸಂಪನ್ನಗೊಂಡ 4 ದಿವಸಗಳ ಕಾಸರಗೋಡು ಜಿಲ್ಲಾ ಸ್ಕೌಟ್ಸ್ ಎಂಡ್ ಗೈಡ್ಸ್ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿಭೆಯನ್ನು ತೋರಿದವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಹಲವಾರು ಮಂದಿ ಪಾಲ್ಗೊಂಡರು.