ಟಿಪ್ಪರ್ ಡಿಕ್ಕಿ ಸ್ಕೂಟರ್ ಸವಾರ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಕೈಕಂಬ ಬಳಿಯ ರಸ್ತೆಯಲ್ಲಿ ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ್ದಾನೆ.

ಮಳಲಿ ನಿವಾಸಿ ಭಾಸ್ಕರ್ ಮೃತ ದುರ್ದೈವಿ. ಮಂಗಳೂರಿನಲ್ಲಿ ತನ್ನ ದೈನಂದಿನ ಕೆಲಸ ಮುಗಿಸಿಕೊಂಡು ಸ್ಕೂಟರ್ ಹತ್ತಿ ಮಳಲಿ ಮನೆ ಕಡೆಗೆ ತೆರಳುತ್ತಿದ್ದ ಭಾಸ್ಕರಗೆ ಕೈಕಂಬದ ಬಳಿ ಟಿಪ್ಪರ್ ಡಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಗೆ ಬಿದ್ದ ಈತನ ತಲೆ ಮೇಲೆ ಟಿಪ್ಪರ್ ಟಯರ್ ಚಲಿಸಿದ್ದು, ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.