ಲಾರಿ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸಾವು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಣಂಬೂರು ಜಂಕ್ಷನ್ ಬಳಿ ಶನಿವಾರ ರಾತ್ರಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಉತ್ತರ ಕನ್ನಡ ನಿವಾಸಿ ಆನಂದ (39) ಎಂಬವರು ಸಾವನ್ನಪ್ಪಿದ್ದಾರೆ.

ಕೆಲಸ ಮುಗಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದ ಸ್ನೇಹಿತ ಯೆಲ್ಲಪ್ಪ ಎಂಬವರ ಸ್ಕೂಟಿಯಲ್ಲಿ ಆನಂದ ಸಹಸವಾರನಾಗಿ ಕುಳಿತುಕೊಂಡಿದ್ದರು.

ಸ್ಕೂಟಿ ಪಣಂಬೂರು ಬಳಿ ತಲುಪುತ್ತಿದ್ದಂತೆ ಲಾರಿ ಡಿಕ್ಕಿ ಹೊಡೆದಿದ್ದು, ಇಬ್ಬರೂ ಸ್ಕೂಟಿಯಿಂದ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ಪೈಕಿ ಸಹಸವಾರ ಆನಂದ ಗಂಭೀರ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.