ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸೈಂಟಿಫಿಕ್ ಇಂಟರೋಗೇಶನ್ ರೂಮ್ ಉದ್ಘಾಟನೆ

ಕಾಸರಗೋಡು : ಆರೋಪಿಗಳನ್ನು ಆಧುನಿಕ ವೈಜ್ಞಾನಿಕ ರೀತಿಯಲ್ಲಿ ವಿಚಾರಿಸಿ ಅವರ ಹೇಳಿಕೆ ದಾಖಲಿಸುವ ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ವೈಜ್ಞಾನಿಕ ವಿಚಾರಣಾ ಘಟಕಕ್ಕೆ ಜಿಲ್ಲಾ ಪೆÇಲೀಸ್ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಸರಳ ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ ಜಿ ಸೈಮನ್ ಚಾಲನೆ ನೀಡಿದರು.

ರಾಜ್ಯ ಸರಕಾರದ ಯೋಜನಾ ನಿಧಿಯ ಆರ್ಥಿಕ ಸಹಾಯದೊಂದಿಗೆ ಈ ಘಟಕ ಸ್ಥಾಪಿಸಲಾಗಿದೆ.

ಇದು ರಾಜ್ಯದಲ್ಲಿ ಆರಂಭಿಸಲಾದ 4ನೇ ಘಟಕ ಆಗಿದೆ. ಜಿಲ್ಲೆಯಲ್ಲಿ ದಾಖಲಿಸಲಾಗುವ ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಗಳನ್ನು ಈ ಕೇಂದ್ರಕ್ಕೆ ತಂದು ತೀವ್ರ ವಿಚಾರಣೆಗೊಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಲಾಗುವುದು. ಇದಕ್ಕಾಗಿ ಸಿಬಿಐ ಮತ್ತು ರಾಷ್ಟ್ರೀಯ ತನಿಖಾ ದಳ ಸೇರಿದಂತೆ ದೇಶದ ಉನ್ನತ ತನಿಖಾ ತಂಡಗಳ ತಜ್ಞರಿಂದ ನುರಿತ ತರಬೇತಿ ಪಡೆದ ಅಧಿಕಾರಿಗಳನ್ನು ಈ ಘಟಕದ ಪೆÇಲೀಸ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈ ಕೇಂದ್ರದಲ್ಲಿ ಇಂಟರ್ನೆಟ್ ಸೌಕರ್ಯವನ್ನು ಏರ್ಪಡಿಸಲಾಗಿದ್ದು ವಿಚಾರಣೆಗೆ ಅಗತ್ಯದ ಸಲಹೆಗಳನ್ನು ತಜ್ಞರಿಂದ ಇಂಟರ್ನೆಟ್ ಮೂಲಕ ಪಡೆಯಬಹುದಾಗಿದೆ. ಆರೋಪಿಗಳನ್ನು ವಿಚಾರಿಸುವ ವೇಳೆ ಅದನ್ನು ಉನ್ನತ ಪೆÇಲೀಸ್ ಅಧಿಕಾರಿಗಳಿಗೆ ಹೊರಗಿನಿಂದ ನೇರವಾಗಿ ವೀಕ್ಷಿಸಲು ಅಗತ್ಯದ ವೀಡಿಯೋ ಕಾನ್ಫರೆನ್ಸ್ ಸೌಕರ್ಯವನ್ನು ಈ ಘಟಕದಲ್ಲಿ ಏರ್ಪಡಿಸಲಾಗಿದೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸುವ ಪೆÇಲೀಸ್ ಅಧಿಕಾರಿಗಳು ಮತ್ತು ಆರೋಪಿಗಳಿಂದ ಪೂರ್ಣ ಮಾಹಿತಿ ಹೊರಗೆಡಹುವ ರೀತಿಯ ವಾತಾವರಣವನ್ನು ಇಲ್ಲಿ ಒದಗಿಸಲಾಗಿದೆ. ಆರೋಪಿಗಳು ನೀಡುವ ಹೇಳಿಕೆಗಳ ಧ್ವನಿ ಮುದ್ರಿಸಲು ಅಗತ್ಯವಿರುವ ರೆಕಾರ್ಡಿಂಗ್ ಸ್ಟುಡಿಯೋ, ವೀಡಿಯೋ, ಆಡಿಯೋ, ವೀಡಿಯೋ ಕಾನ್ಫರೆನ್ಸಿಂಗ್ ಸೌಕರ್ಯ ಮತ್ತು ಆರೋಪಿಗಳನ್ನು ವಿಚಾರಿಸುವ ವೇಳೆ ಅವರ ಧ್ವನಿ ಹೊರಗೆ ಕೇಳಿಸದ ರೀತಿಯ ಅಗತ್ಯದ ಭದ್ರತೆಯನ್ನು ಏರ್ಪಡಿಸಲಾಗಿದೆ. ಜೊತೆಗೆ ಇದು ಹವಾನಿಯಂತ್ರಿತ ಘಟಕವೂ ಆಗಿದೆ.

LEAVE A REPLY