ಕುಂಜತ್ತೂರು ಶಾಲೆಯಲ್ಲಿ ಪಂ ಮಟ್ಟದ 2 ದಿನದ ವಿಜ್ಞಾನೋತ್ಸವ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಪಂಚಾಯತ್ ಮಟ್ಟದ ಎರಡು ದಿನಗಳ ವಿಜ್ಞಾನೋತ್ಸವಕ್ಕೆ ಶುಕ್ರವಾರ ಚಾಲನೆ ದೊರಕಿತು. ಮಂಜೇಶ್ವರ ಗ್ರಾ ಪಂ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ಪೆÇಟಾಶಿಯಂಗೆ ಸ್ಪಿರಿಟ್ ಹಾಕಿ ಉರಿಸುವುದರೊಂದಿಗೆ ವಿಜ್ಞಾನೋತ್ಸವಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,   “ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸಲು ಹಾಗೂ ಕಲಿಕೆಯಲ್ಲಿ ಉತ್ಸಾಹ ಮೂಡಲು ಆಯೋಜಿಸ ಲಾಗುತ್ತಿರುವ ವಿಜ್ಞಾನೋತ್ಸವದ ರೀತಿಯ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸ ಬೇಕಾಗಿದೆ. ವಿದ್ಯಾರ್ಥಿಗಳನ್ನು ಉತ್ತಮ ದರ್ಜೆಗೇರಿಸುವ ಅಧ್ಯಾಪಕರ ಪ್ರಯತ್ನದಲ್ಲಿ ಪಾಲಕರು ಕೂಡಾ ಕೈ ಜೋಡಸಬೇಕಾದದ್ದು ಅನಿವಾರ್ಯ” ಎಂದು ಹೇಳಿದರು.

ವಿಜ್ಞಾನ ಮೇಳದಲ್ಲಿ ಎಸ್ ಎ ಟಿ ಶಾಲೆ, ಬಂಗ್ರಮಂಜೇಶ್ವರ ಶಾಲೆ, ಉದ್ಯಾವರ ಗುಡ್ಡೆ ಶಾಲೆ ಹಾಗೂ ಕುಂಜತ್ತೂರು ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 70 ಮಂದಿ ಪಾಲ್ಗೊಂಡರು.

LEAVE A REPLY