ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಡಿ ವೈ ಎಫ್ ಐ ಕುಂಜತ್ತೂರು ವಿಲೇಜ್ ಸಮಿತಿಯ ವತಿಯಿಂದ ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಂದು ಬೆಳಿಗ್ಗೆ ಶಾಲಾ ಬ್ಯಾಗನ್ನು ವಿತರಿಸಲಾಯಿತು. ಡಿ ವೈ ಎಫ್ ಐ ಬ್ಲಾಕ್ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ವಿದ್ಯಾರ್ಥಿಗಳಿಗೆ ಬ್ಯಾಗನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಲು ಇದೀಗ ಬ್ಯಾಗನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಇನ್ನೂ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.