ದನಗಳ ಹತ್ಯೆ ಮಾಡಬೇಡಿ : ಮುಸ್ಲಿಮರಿಗೆ ವಿದ್ವಾಂಸರ ಕರೆ

ಹೈದರಾಬಾದ್ : ದನಗಳನ್ನು ಹತ್ಯೆ ಮಾಡುವುದರಿಂದ ದೂರವಿರುವಂತೆ ನಗರದ ಮುಸ್ಲಿಂ ವಿದ್ವಾಂಸರು ತಮ್ಮ ಸಮುದಾಯದ ಮಂದಿಯನ್ನು ವಿನಂತಿಸಿದ್ದಾರೆ. ದೇಶಾದ್ಯಂತ ಹಲವು ಕಡೆಗಳಲ್ಲಿ ಗೋಹತ್ಯೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಗಲಾಟೆಗಳ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ.

ಕೆಲ ಸಂಘಟನೆಗಳು ಗೋಹತ್ಯೆಯನ್ನು ನೆಪವಾಗಿಟ್ಟುಕೊಂಡು ಮತೀಯ ಹಿಂಸೆಯನ್ನು ಪ್ರೇರೇಪಿಸುತ್ತಿವೆ ಎಂದು  ಜಮಾತೆ-ಇಸ್ಲಾಮಿ ಸಂಘಟನೆಯ ತೆಲಂಗಾಣ ಮತ್ತು ಒಡಿಶಾ ಘಟಕಗಳ ಅಧ್ಯಕ್ಷ ಮೊಹಮ್ಮದ್ ಖಾನ್ ಹೇಳಿದ್ದಾರೆ.