ಕರ್ಣನ್ ಮೇಲ್ಮನವಿಗೆ ಸುಪ್ರೀಂ ತಿರಸ್ಕಾರ

ನವದೆಹಲಿ : ನ್ಯಾಯಾಲಯದ ನಿಂದನೆ ಆರೋಪಕ್ಕಾಗಿ ತನ್ನ ವಿರುದ್ಧ ಜಾರಿಯಾಗಿರುವ ಆರು ತಿಂಗಳ ಜೈಲು ಶಿಕ್ಷೆಗೆ ಆದೇಶಕ್ಕೆ ತಡೆಯಾಜ್ಞೆ ಕೋರಿ ಕಲ್ಕತ್ತ “ಹೈಕೋರ್ಟ್ ಜಸ್ಟಿಸ್ ಸಿ ಎಸ್ ಕರ್ಣನ್ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಜಸ್ಟಿಸ್ ಕರ್ಣನ್ ನ್ಯಾಯಾಲಯದ ವಿರುದ್ಧ ಗಂಭೀರ ಸ್ವರೂಪದ ನಿಂದನೆ ಮಾಡಿದ್ದಾರೆ. ಹಾಗಾಗಿ ಯಾರೇ ಇರಲಿ ಇದು ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗಲೇಬೇಕಾದ ಪ್ರಕರಣವಾಗಿದೆ” ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮೇ 12ರಂದು ಹೊರಡಿಸಿರುವ ಆದೇಶದಲ್ಲಿ ಹೇಳಿದೆ. ತನ್ನ ವಿರುದ್ಧ ನೀಡಿರುವ ತೀರ್ಪು `ಸಮರ್ಥನೀಯಲ್ಲ”  ಎಂದು ಮನವಿಯಲ್ಲಿ ಜಸ್ಟಿಸ್ ಕರ್ಣನ್ ತಿಳಿಸಿದ್ದರು.