ಜೀವಾವಧಿ ಶಿಕ್ಷೆಗೆ `ಕಠಿಣ’ ಪದ ಸೇರಿಕೆ ಸರಿಯೇ ?

ಸುಪ್ರೀಂ ಕೋರ್ಟ್ ಪರಿಶೀಲನೆ

ನವದೆಹಲಿ : ನ್ಯಾಯಾಲಯಗಳು ಜೀವಾವಧಿ ಶಿಕ್ಷೆ ಘೋಷಿಸುವ ಸಂದರ್ಭಗಳಲ್ಲಿ ಅವುಗಳಿಗೆ `ಕಠಿಣ’ ಎಂಬ ಪದ ಸೇರಿಸುವುದಕ್ಕೆ ಶಾಸನಬದ್ಧವಾಗಿ ಅಧಿಕಾರ ಹೊಂದಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಅಪರಾಧ ಪ್ರಕ್ರಿಯಾ ಸಂಹಿತೆ ಯಾ ಕೊಲೆಯಂತಹ ಅಪರಾಧಗಳಿಗೆ ಸಂಬಂಧಪಟ್ಟ ಕಾನೂನುಗಳು `ಕಠಿಣ’ ಎಂಬ ಪದವನ್ನು ಜೀವಾವಧಿ ಶಿಕ್ಷೆಯನ್ನು ವಿಧಿಸುವ ಸಂದರ್ಭದಲ್ಲಿ ಸೇರಿಸಲು ಅವಕಾಶ ಕೊಟ್ಟಿಲ್ಲವೆಂದು ವಾದಿಸಿ ಸಲ್ಲಿಸಲಾದ ಮನವಿಯೊಂದನ್ನು ಜಸ್ಟಿಸ್  ಎ ಕೆ ಸಿಕ್ರಿ ಹಾಗೂ ಜಸ್ಟಿಸ್ ಆರ್ ಕೆ ಆಗ್ರವಾಲ್ ಅವರನ್ನೊಳಗೊಂಡ ಪೀಠ ಪರಿಶೀಲಿಸಲಿದೆ.