ಹೈಕೋರ್ಟುಗಳಲ್ಲಿ ಬಾಕಿ ಕೇಸು ವಿಲೇವಾರಿಗೆ ಸುಪ್ರೀಂ ಸಮಿತಿ

ನವದೆಹಲಿ : ದೇಶದ ಹೈಕೋರ್ಟುಗಳಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಇನ್ನಷ್ಟು ವಿಳಂಬ ಮಾಡದೆ ವಿಚಾರಣೆಗೆ ಕೈಗೆತ್ತಿಕೊಂಡು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್, ಇಬ್ಬರು ಹಿರಿಯ ವಕೀಲರ ಸಮಿತಿಯೊಂದನ್ನು ರಚಿಸಿದೆ. ಸುಪ್ರೀಂ ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಸಪ್ರೆ ಮತ್ತು ರೋಯ್ ಅವರಿದ್ದ ನ್ಯಾಯಪೀಠವೊಂದು ಕಳೆದ ವಾರ ಹೊಸ ಸಮಿತಿಗೆ ಹಿರಿಯ ವಕೀಲರಾದ ಶ್ಯಾಂ ದಿವಾನ್ ಮತ್ತು ಸಿ ಯು ಸಿಂಗರನ್ನು ನಿಯುಕ್ತಿಗೊಳಿಸಿ ಆದೇಶಿಸಿತ್ತು. ಎಲ್ಲ ಹೈಕೋರ್ಟುಗಳ ಪೈಕಿ ಅಲಹಾಬಾದ್ ಹೈಕೋರ್ಟಿನಲ್ಲಿ ಅತ್ಯಧಿಕ ಸಂಖ್ಯೆಯ 9.24 ಲಕ್ಷ ಪ್ರಕರಣಗಳು ನೆನೆಗುದಿಗೆ ಬಿದ್ದಿವೆ. ಇವುಗಳಲ್ಲಿ 3.09 ಲಕ್ಷ ಕೇಸುಗಳು 10 ವರ್ಷಕ್ಕಿಂತಲೂ ಹಳೆಯದ್ದವುಗಳಾಗಿವೆ.