ಸುಪ್ರೀಂ ಆದೇಶ ಪ್ರತಿ ಬೆಂಗಳೂರು ತಲುಪಿಲ್ಲ

ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿಗಳಾದ ವಿ ಕೆ ಶಶಿಕಲಾ, ಶಶಿಕಲಾ ಅಣ್ಣನ ಪತ್ನಿ ಇ ಇಳವರಸಿ ಹಾಗೂ ಜಯಾ ದತ್ತು ಪುತ್ರ ಸುಧಾಕರನ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ್ದರೂ, ಆದೇಶದ ಪ್ರತಿಗಳು ಇನ್ನೂ ಕೂಡಾ ಹೈಕೋರ್ಟ್ ಅಥವಾ ಸಿವಿಲ್ ಮತ್ತು ಸೆಷನ್ ಕೋರ್ಟಿಗೂ ತಲುಪಿಲ್ಲ.

ವಿಚಾರಣೆ ಪೂರ್ಣಗೊಂಡ ಬಳಿಕ ಆದೇಶದ ಪ್ರತಿ ಎಷ್ಟು ಹೊತ್ತಿಗಾದರೂ ಬರಬಹುದು ಎಂದು ನ್ಯಾಯಾಂಗದ ಅಧಿಕಾರಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಸಂಜೆಯಾದರೂ ಬಂದಿಲ್ಲ. ಹೈಕೋರ್ಟ್ ಆಗಲೀ, ಸಿವಿಲ್ ಕೋರ್ಟ್ ಆಗಲಿ ಅಪೆಕ್ಸ್ ಕೋರ್ಟಿನಿಂದ ಯಾವುದೇ ಪ್ರತಿ ಪಡೆದಿಲ್ಲ.