ಜಾರ್ಜ್, ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುಪ್ರೀಂ ನೋಟಿಸ್

ಗಣಪತಿ ಪ್ರಕರಣ

ನವದೆಹಲಿ : ಕಳೆದ ವರ್ಷ ಜುಲೈ 7ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಡಿಎಸ್ಪಿ ಎಂ ಕೆ ಗಣಪತಿ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಯೊಂದಕ್ಕೆ ಪ್ರತಿಕ್ರಿಯೆ ನೀಡುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಅವರಿಗೆ ಸುಪ್ರೀಂ ಕೋರ್ಟ್ ನಿನ್ನೆ ನೋಟಿಸು ಜಾರಿ ಮಾಡಿತು.

ಸಾಯುವುದಕ್ಕಿಂತ ಮುಂಚೆ, ಮಂಗಳೂರಿನಲ್ಲಿ ಪೊಲೀಸ್ ಮಹಾ-ನಿರೀಕ್ಷಕರಾಗಿದ್ದಾಗ ಗಣಪತಿ ಖಾಸಗಿ ಟೀವಿ ಚಾನೆಲ್ಲೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಚಿವ ಮತ್ತು ಪೊಲೀಸ್ ಅಧಿಕಾರಿಗಳಾದ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಮಾನಸಿಕ ಕಿರುಕುಳ ನೀಡಿದ್ದರೆಂದು ಹೇಳಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ ಆಗಿನ ಗೃಹ ಸಚಿವ ಜಾರ್ಜ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಸಿಐಡಿ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿದ ಬಳಿಕ ಪುನಾ ಸಚಿವರಾಗಿದ್ದಾರೆ.

ಗಣಪತಿಯ ತಂದೆ ಕುಶಾಲಪ್ಪ ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್ ಅದರ್ಶ್ ಕುಮಾರ್ ಗೋಯಲ್ ಮತ್ತು ಜಸ್ಟಿಸ್ ಲಲಿತ್ ನ್ಯಾಯಪೀಠ ಜಾರ್ಜ್ ಮತ್ತು ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಲು ನಿರ್ಧರಿಸಿದೆ. ಕೋರ್ಟಿಗೆ ನಾಲ್ಕು ವಾರದೊಳಗೆ ಈ ಮೂವರು ತಮ್ಮ ಪ್ರತಿಕ್ರಿಯೆ ನೀಡಬೇಕಿದೆ.