ಕರಾವಳಿ ಅಲೆ ಬಿವೀಸೀ ಬಂಧನಕ್ಕೆ ಕಾರಣವಾಗಿದ್ದ ಮಾನನಷ್ಟ ಕೇಸು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸಾಂದರ್ಭಿಕ ಚಿತ್ರ

ನವದೆಹಲಿ : ರಾಜ್ಯದಲ್ಲಿ ಯಡ್ಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಉಡುಪಿಯ  ವಿ ಎಸ್ ಆಚಾರ್ಯ ಗೃಹ ಮಂತ್ರಿಯಾಗಿದ್ದಾಗ ದುರುದ್ದೇಶಪೂರ್ವಕವಾಗಿ ತಮ್ಮ ಪಕ್ಷದವರಿಂದ ಕರಾವಳಿ ಅಲೆ ಮೇಲೆ ಹಾಕಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ವಜಾ ಮಾಡಿದೆ.

ಇದೇ ಪ್ರಕರಣದಲ್ಲಿ ರಾಜ್ಯ ಹೈಕೋರ್ಟು 2009ರಲ್ಲಿ ಕರಾವಳಿ ಅಲೆಯ ಅಧ್ಯಕ್ಷ ಬಿ ವಿ ಸೀತಾರಾಂ ಅವರ ಬಂಧನವನ್ನು ಅಕ್ರಮವೆಂದು ಸಾರಿ 10 ಸಾವಿರ ರೂ ಪೊಲೀಸ್ ಅಧಿಕಾರಿಗಳಿಗೆ ದಂಡ ವಿಧಿಸಿದ್ದಲ್ಲದೇ, ಇತ್ತೀಚೆಗೆ ಬಿವಿಸೀಗೆ ಪರಿಹಾರವೆಂದು ಲಕ್ಷ ರೂ ಕೊಡಿಸಿತ್ತು. ಈ ಕೇಸಿನ ಸಂಬಂಧ ಬಿಜೆಪಿ ಸರಕಾರ ಮಾಡಿದ್ದ ಮೇಲ್ಮನವಿಯನ್ನೂ ಕೂಡಾ ಸುಪ್ರೀಂ ಕೋರ್ಟು ವಜಾಗೊಳಿಸಿತ್ತು.

ಇದೀಗ ಮೊನ್ನೆ ಹೊರಡಿಸಿದ ಮುಂದುವರಿದ ಆದೇಶದಲ್ಲಿ  ಉಡುಪಿ ಇಡೀ ಪ್ರಕರಣವನ್ನೇ ರಂಜನ ಗೊಗೊಯ್ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ಪ್ರಕರಣದಲ್ಲಿ ಬಿವಿಸೀ ಯಾವುದೇ ವಿಧವಾಗಿ ಭಾಗಿಯಲ್ಲ ಮತ್ತು ಸೂಕ್ತ ದಾಖಲೆಗಳ ಮೂಲಕ ಬಿವೀಸೀ ಇದನ್ನು ಸಾಬೀತು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟು ತೀರ್ಪಿತ್ತಿದೆ. ಸೀತಾರಾಂ ಪರ ಹ್ಯೂಮನ್ ರೈಟ್ಸ್ ಲೀಗಲ್ ನೆಟ್ವರ್ಕ್ ಮುಖ್ಯಸ್ಥ ಸೀನಿಯರ್ ಅಡ್ವೋಕೇಟ್ ಕಾಲಿನ್ ಗಾನಸಾಲ್ವಿಸ್ ವಾದಿಸಿದ್ದರು.

ಭೋಜರಾಜ ಶೆಟ್ಟಿ ಎನ್ನುವವರು ದೂರುದಾರರಾಗಿ ಉಡುಪಿ ಜೆಂ ಎಫ್ ಎಫ್ ಸಿ ಕೋರ್ಟಿನಲ್ಲಿ 2007ರಲ್ಲಿ ದಾಖಲಿಸಿದ್ದ ಈ ಮಾನನಷ್ಟ ಮೊಕದ್ದಮೆಯಲ್ಲಿ 2009ರಲ್ಲಿ ತನ್ನ ಬಂಧನವನ್ನು ಅಕ್ರಮ ಎಂದು ಸಾರಿ ನಾಲ್ವರು ಪೊಲೀಸ್ ಅಧಿಕಾರಿಗಳಿಂದ ದಂಡ ಕೊಡಿಸಿ, ಅನಂತರ ಅವರಿಂದ ಮತ್ತೆ ಲಕ್ಷ ರೂ ಪರಿಹಾರ ಕೊಡಿಸಿದ ಹೈಕೋರ್ಟಿನ ತೀರ್ಪುಗಳು ಮತ್ತು ಸುಪ್ರೀಂ ಕೋರ್ಟಿನಲ್ಲಿ ಇದೀಗ ದೊರೆತ ಅಂತಿಮ ಜಯ ಸತ್ಯನಿಷ್ಠ `ಕರಾವಳಿ ಅಲೆ’ಗೆ ಒಂದೇ ಕೇಸಿನಲ್ಲಿ ದೊರೆತ `ಹ್ಯಾಟ್ರಿಕ್