ಆಧಾರ್ ಕಡ್ಡಾಯಕ್ಕೆ ತಡೆ ಹೇರಲು ಸುಪ್ರೀಂ ನಕಾರ

ನವದೆಹಲಿ :  ವಿವಿಧ ಸಮಾಜ ಕಲ್ಯಾಣ ಯೋಜನೆಗಳ  ಸವಲತ್ತು ಪಡೆಯಲು ನಾಗರಿಕರು ತಮ್ಮ ಆಧಾರ್ ಸಂಖ್ಯೆಗಳನ್ನು ಅರ್ಜಿಯಲ್ಲಿ ಕಡ್ಡಾಯವಾಗಿ  ಉಲ್ಲೇಖಿಸಬೇಕೆಂದು  ಸರಕಾರ ಹೊರಡಿಸಿರುವ ಅಧಿಸೂಚನೆಗಳಿಗೆ ತಡೆಯಾಜ್ಞೆ ವಿಧಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದೇ ವಿಚಾರದಲ್ಲಿ ಈಗಾಗಲೇ ಸಲ್ಲಿಸಲಾಗಿರುವ ಹಾಗೂ ವಿಚಾರಣೆಗೆ ಬಾಕಿಯಿರುವ ಇತರ ಅಪೀಲುಗಳನ್ನೂ ಪರಿಗಣಿಸುವುದು ಸೂಕ್ತವಾಗಿದೆ ಎಂದು ಜಸ್ಟಿಸ್ ಎ ಎಂ ಖಾನ್ವಿಲ್ಕರ್ ಹಾಗೂ ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠ ಅಭಿಪ್ರಾಯ ಪಟ್ಟಿತು. ಆಧಾರ್ ಕಡ್ಡಾಯ ಕುರಿತಂತೆ ತಾನು  ಜೂನ್ 30ಕ್ಕೆ ನಿಗದಿ ಪಡಿಸಿದ ಕೊನೆಯ ದಿನಾಂಕವನ್ನು ಮುಂದೂಡುವುದಿಲ್ಲ ಎಂದು ಸರಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ.