ಹೈಕೋರ್ಟಿಗೆ ಶೀಘ್ರ ಜಡ್ಜುಗಳ ನೇಮಕಾತಿ : ಸುಪ್ರೀಂ ಭರವಸೆ

ನವದೆಹಲಿ : ಕರ್ನಾಟಕ ಹೈಕೋರ್ಟಿನ ಕೆಲವು ನ್ಯಾಯಾಧೀಶರ ಖಾಲಿ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಹೈಕೋರ್ಟಿಗೆ ಒಟ್ಟು 62 ನ್ಯಾಯಾಧೀಶರುಗಳ ಹುದ್ದೆ ಮಂಜೂರಾಗಿದ್ದರೂ ಸದ್ಯ ಅಲ್ಲಿ ಹಂಗಾಂಮಿ ಮುಖ್ಯ ನ್ಯಾಯಮೂರ್ತಿಗಳ ಸಹಿತ 25 ನ್ಯಾಯಾಧೀಶರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.